ಬರಪೀಡಿತ ಪ್ರದೇಶಕ್ಕೆ ಕುಡಿವ ನೀರು ಒದಗಿಸಲು ಆಗ್ರಹ
ತರೀಕೆರೆ: ತಾಲೂಕಿನ ಲಕ್ಕವಳ್ಳಿ ಮಾರ್ಗವಾಗಿ ಭದ್ರಾ ನಾಲೆಯಿಂದ ಬೀರೂರು, ಕಡೂರಿಗೆ ಒದಗಿಸಿರುವ ಕುಡಿಯುವ ನೀರಿನ ಯೋಜನೆಯಲ್ಲಿ ತರೀಕೆರೆ ಪಟ್ಟಣ ಸೇರಿದಂತೆ ಹಲವು ಹಳ್ಳಿಗಳನ್ನು ಸೇರ್ಪಡೆ ಮಾಡಬೇಕು ಎಂದು ಜಿಲ್ಲಾ ದಸಂಸ ಮಾಜಿ ಉಪಾಧ್ಯಕ್ಷರು ಎ.ಆರ್.ಕೆ. ಶ್ರೀನಿವಾಸ್ ಒತ್ತಾಯಿಸಿದ್ದಾರೆ.
ಈ ಸಂಬಂಧ ಅವರು ಸಿಎಂ, ನೀರಾವರಿ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ಸಂಸತ್ ಸದಸ್ಯರಿಗೆ, ಕಡೂರು ಮತ್ತು ತರೀಕೆರೆ ಶಾಸಕರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ನೀರಿನ ಅಭಾವ; ಬೀರೂರು- ಕಡೂರು ಸೇರಿದಂತೆ ಭದ್ರಾ ಡ್ಯಾಂನಿಂದ ತರೀಕೆರೆ ಮಾರ್ಗವಾಗಿ ಹಾದು ಹೋಗುವಂತಹ ಕುಡಿಯುವ ನೀರಿನಲ್ಲಿ ತರೀಕರೆ ಪಟ್ಟಣ ಸೇರಿದಂತೆ ತಾಲೂಕಿನ ಕೆಲವು ಗ್ರಾಮಾಂತರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಅಭಾವವಿದ್ದು, ಕುಡಿಯುವ ನೀರಿನ ಆಭಾವ ಹೆಚ್ಚಾಗಿರುವುದರಿಂದ, ಈ ಯೋಜನೆಯಲ್ಲಿ ಈ ಹಳ್ಳಿಗಳನ್ನು ಸೇರ್ಪಡೆ ಮಾಡಿಕೊಂಡು ಸಾರ್ವಜನಿಕರ ಬೇಡಿಕೆ ಬಗೆಹರಿಸುವುದರ ಮೂಲಕ ಅನುಕೂಲ ಮಾಡಿಕೊಡಬೇಕೆಂದು ಅವರು ಪತ್ರದಲ್ಲಿ ಮನವಿ ಮಾಡಿದ್ದಾರೆ.