ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ರೇಲ್ವೆ ಕಾಮಗಾರಿ: ಶ್ವೇತಪತ್ರ ಹೊರಡಿಸಿ

Lingaraj Badiger
Updated On : 21 Nov 2013, 10:45 am

ಚಿಕ್ಕಮಗಳೂರು: ಕಡೂರು- ಚಿಕ್ಕಮಗಳೂರು ರೇಲ್ವೆ ಕಾಮಗಾರಿಗೆ ಹಣ ಬಿಡುಗಡೆಯಾಗಿರುವ ಬಗ್ಗೆ ಶ್ವೇತಪತ್ರ ಹೊರಡಿಸಬೇಕೆಂದು ಶಾಸಕ ಸಿ.ಟಿ. ರವಿ ಆಗ್ರಹಿಸಿದ್ದಾರೆ.
ಇಂದಿರಾಗಾಂಧಿಯವರ ಅಧಿಕಾರದ ಅವಧಿಯಲ್ಲಿ ಈ ಯೋಜನೆಗೆ ಎಷ್ಟು ಹಣ ಬಿಡುಗಡೆಯಾಗಿದೆ. ಬೇರೆಯವರು ಪ್ರಧಾನಿಯಾಗಿದ್ದಾಗ, ಸಂಸದರು ಆಗಿದ್ದಾಗ ಎಷ್ಟು ಹಣ ಬಿಡುಗಡೆಯಾಗಿದೆ ಎಂಬುದು ಜನರಿಗೂ ತಿಳಿಯಲಿ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ರೈಲಿನ ಉದ್ಘಾಟನಾ ಸಮಾರಂಭಕ್ಕೆ ಕೇಂದ್ರದ ನಾಲ್ವರು ಪ್ರಭಾವಿ ಸಚಿವರು ಹಾಗೂ ಮುಖ್ಯಮಂತ್ರಿಗಳ ಬರುವುದರಿಂದ ಜಿಲ್ಲೆಯ ಜನರು ಹೊಸ ಕೊಡುಗೆಯನ್ನು ನಿರೀಕ್ಷಿಸಿದ್ದರು. ಅದರೆ, ಅದು ಹುಸಿಯಾಗಿದೆ. ಕೇಂದ್ರದ ಸಚಿವರಾಗಲಿ, ಮುಖ್ಯಮಂತ್ರಿಯಾಗಲಿ ಜಿಲ್ಲೆಯ ಸಮಸ್ಯೆಗಳಿಗೆ ಸ್ಪಂದಿಸುವ ಮಾತುಗಳನ್ನಾಡಿಲ್ಲ ಎಂದರು.
ಸಮಸ್ಯೆ ಕೇಳಲು ಬಂದಿರಲಿಲ್ಲ: ಅಡಕೆ, ತೆಂಗು ಬೆಳೆಗಾರರು ಕಷ್ಟದಲ್ಲಿದ್ದಾರೆ, ಅವರಿಗೆ ಪರಿಹಾರ ಹಾಗೂ ಕಾಫಿ ಬೆಳೆಗಾರರಿಗೆ ಸ್ವಂದಿಸುವ ಕೆಲಸ ಸಚಿವರು ಮಾಡಲಿಲ್ಲ. ಅವರು ಕೇವಲ ರಾಜಕಾರಣ ಮಾಡಲು ಹಾಗೂ ಈ ಯೋಜನೆ ಕಾಂಗ್ರೆಸ್‌ನ ಕೊಡುಗೆ ಎಂದು ಬಿಂಬಿಸಲು ಇಲ್ಲಿಗೆ ಬಂದಿದ್ದರು ಟೀಕಿಸಿದರು.
ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಸಚಿವ ಸಂಪುಟ ಸಭೆಯಲ್ಲಿ ಕಾರವಾರ, ಕೊಡಗು, ಕೊಪ್ಪಳ, ಚಾಮರಾಜನಗರ ಹಾಗೂ ತುಮಕೂರು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜುಗಳ ಸ್ಥಾಪನೆಗೆ ತೀರ್ಮಾನ ತೆಗೆದುಕೊಳ್ಳಲಾಗಿತ್ತು. ತುಮಕೂರು, ಚಿಕ್ಕಮಗಳೂರು ಹೊರತುಪಡಿಸಿ ಇನ್ನುಳಿದ ಜಿಲ್ಲೆಗಳ ಮೆಡಿಕಲ್ ಕಾಲೇಜುಗಳಿಗೆ ಮಂಜೂರಾತಿ ನೀಡಲಾಗಿದೆ. ಈ ರೀತಿಯ ತಾರತಮ್ಯ ಮಾಡಿದ್ದು ಯಾಕೆಂದು ಪ್ರಶ್ನಿಸಿದರು. ಕಳಸಾಪುರಕ್ಕೆ ಐಟಿಐ ಕಾಲೇಜು, ಚಿಕ್ಕಮಗಳೂರಿಗೆ ನರ್ಸಿಂಗ್ ಹಾಸ್ಟೆಲ್ ಮಂಜೂರು ಮಾಡಿರುವ ಕಾರ್ಮಿಕ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಚಿವರಿಗೆ ಸಿ.ಟಿ. ರವಿ ಅವರು ಅಭಿನಂದನೆ ಸಲ್ಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement