ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಕಿಶೋರಿಯರ ರಕ್ಷಣೆ ಪೋಷಕರ ಹೊಣೆ

Lingaraj Badiger
Updated On : 22 Nov 2013, 11:28 am

ಕ.ಪ್ರ.ವಾರ್ತೆ, ತರೀಕೆರೆ, ನ. 21
ಪ್ರಸ್ತುತ ವೈಭವೀಕರಣದ ಜಗತ್ತಿನಲ್ಲಿ ಪ್ರೌಢಾವಸ್ಥೆಯ ಕಿಶೋರಿಯರ ಆರೋಗ್ಯ ಮತ್ತು ರಕ್ಷಣೆಗಾಗಿ ಪೋಷಕರ ಜೊತೆಯಲ್ಲಿ ಸಹಕರಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಯುವ ಪ್ರಶಸ್ತಿ ಪುರಸ್ಕೃತ ಎಂ. ನರೇಂದ್ರ ತಿಳಿಸಿದರು.
ಅವರು, ಗುರುವಾರ ಸಮೀಪದ ಕಾಮನದುರ್ಗ ಗ್ರಾಪಂ ಆರೋಗ್ಯ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಇಲಾಖೆ ವತಿಯಿಂದ ಕಾಮನದುರ್ಗ- ಸಂತವೇರಿಯಲ್ಲಿ ಏರ್ಪಡಿಸಲಾಗಿದ್ದ ಕಿಶೋರಿಯರ ದಿನಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಬಲೀಕರಣ: ಸರ್ಕಾರ 2006-07ರಲ್ಲಿ ರಾಜೀವ್ ಗಾಂಧಿ ಸಬಲೀಕರಣ ಯೋಜನೆಯಲ್ಲಿ, ಕಿಶೋರಿಯರ ಯೋಜನೆ ಏರ್ಪಡಿಸಿದ್ದು, ಈ ಯೋಜನೆಯನ್ನು ರಾಜ್ಯದ 9 ಜಿಲ್ಲೆಗಳಲ್ಲಿ ಮಾತ್ರ ಜಾರಿಗೆ ತಂದಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಈ ಯೋಜನೆ ಜಾರಿಗೆ ತರಬೇಕು ಎಂದು ಅವರು ಮನವಿ ಮಾಡಿದರು.
ಗ್ರಾಪಂ ಅಧ್ಯಕ್ಷ ದೇವರಾಜ್ ಮಾತನಾಡಿ, ಕಿಶೋರಿಯರ ಅರೋಗ್ಯ ಮತ್ತು ಪೌಷ್ಟಿಕತೆಗೆ ನೆರವು ನೀಡುವ ಇಲಾಖೆಗಳ ಜೊತೆ ಗ್ರಾಪಂ ಸಹಕರಿಸಿ ಎಲ್ಲಾ ನೆರವುಗಳನ್ನು ನೀಡಲಾಗುವುದು ಎಂದು ತಿಳಿಸಿದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವೇಲಾಯುಧನ್, ಪಿಡಿಒ ದಿವ್ಯಜ್ಯೋತಿ ಮಾತನಾಡಿದರು.    
ಗ್ರಾಪಂ ಸದಸ್ಯ ಶಾಂತಮ್ಮ, ಮುಬಿನಾಬಾನು, ಎಸಿಡಿಪಿಒ ಜ್ಯೋತಿಲಕ್ಷ್ಮಿ, ತಿಮ್ಮಮ್ಮ, ವೀರಭದ್ರಪ್ಪ ಮೊದಲಾದವರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement