ವಿನಾಶದ ಅಂಚಿನಲ್ಲಿ ಮೀನು ಸಂತತಿ: ಆತಂಕ
ಮೂಡಿಗೆರೆ: ಜಾಗತಿಕ ಹಸಿವು ಮತ್ತು ಅಪೌಷ್ಟಿಕತೆ ನೀಗಿಸುವಲ್ಲಿ ಮೀನುಗಾರಿಕಾ ಕ್ಷೇತ್ರದ ಪಾಲು ಗಮನಾರ್ಹವಾಗಿದೆ ಎಂದು ಮಂಗಳೂರು ಮೀನುಗಾರಿಕೆ ಮಹಾವಿದ್ಯಾಲಯ ಪ್ರಾಧ್ಯಾಪಕ ಡಾ. ಶಿವಕುಮಾರ್ ಮಗದ ಹೇಳಿದರು.
ಹ್ಯಾಂಡ್ ಪೋಸ್ಟ್ನಲ್ಲಿರುವ ವಲಯ ಕೃಷಿ ಸಂಶೋಧನಾ ಕೇಂದ್ರದಲ್ಲಿ ನಡೆದ ವಿಶ್ವ ಮೀನುಗಾರಿಕೆ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜಾಗತಿಕವಾಗಿ ಮೀನುಗಾರಿಕೆ ಕ್ಷೇತ್ರ ಸುಮಾರು ಪ್ರಪಂಚದ ಒಟ್ಟು ಜನಸಂಖ್ಯೆಯ ಶೇ. 8 ಮಂದಿಗೆ ಜೀವನಾಧಾರವಾಗಿದೆ. ಆದರೆ, ಶೇ. 80ಕ್ಕೂ ಹೆಚ್ಚು ಮೀನಿನ ಸಂತತಿ ವಿನಾಶದ ಅಂಚಿನಲ್ಲಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಡಾ. ಗಂಗಾಧರ ಗೌಡ ಉದ್ಘಾಟಿಸಿದರು. ಡಾ.ಎಸ್.ಡಿ. ರಂಗಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಡಾ.ಡಿ. ಮಾದಯ್ಯ, ಎ.ವಿ. ಸ್ವಾಮಿ, ಡಾ. ಸುಕನ್ಯ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಮೀನುಗಾರಿಕೆ ಕೃಷಿಯಲ್ಲಿ ಸಾಧನೆ ಮಾಡಿದ ಫಿರ್ದೋಸ್ ಫಾತಿಮಾ, ಫಲ್ಗುಣಿಯ ಜಲೀಲ್, ಹಂಜಗುಂಡನ ಹಳ್ಳಿಯ ನರೇಶ್ ಅವರನು ಸನ್ಮಾನಿಸಲಾಯಿತು.