ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

'ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಕನ್ನಡ ಸೀಮಿತವಾಗದಿರಲಿ'

Lingaraj Badiger
Updated On : 22 Nov 2013, 11:28 am

ಚಿಕ್ಕಮಗಳೂರು: ಕನ್ನಡ ಭಾಷೆಯನ್ನು ಕೇವಲ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡಿ ಆನಂದಿಸುವುದಕ್ಕೆ ಸೀಮಿತಗೊಳಿಸಬೇಡಿ, ಅದು ಮನಸ್ಸು ಕಟ್ಟುವ ಪರಿಣಾಮಕಾರಿ ಸಾಧನ ಎಂದು ಸಾಹಿತಿ ಕುಂದೂರು ಅಶೋಕ್ ಹೇಳಿದ್ದಾರೆ.
ಭಾರತ ಸಂಚಾರ ನಿಗಮ ನಿಯಮಿತ ಮನರಂಜನಾ ಕೂಟ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಸಾಹಿತ್ಯ, ಸ್ವಾಭಿಮಾನ ಮತ್ತು ತ್ಯಾಗದ ಸಂಸ್ಕೃತಿಯನ್ನು ನಮಗೆ ನೀಡಿದೆ ಎಂದರು.
ಕನ್ನಡ ಭಾಷೆ ಬೆಳೆಯಲು ಕೇವಲ ಕಥೆ- ಕಾದಂಬರಿಗಳಿಂದ ಸಾಧ್ಯವಿಲ್ಲ. ಭಾಷೆಗೆ ತಂತ್ರಜ್ಞಾನವನ್ನು ಅಳವಡಿಸುವ ಸಾಧ್ಯತೆ ಕುರಿತು ಚಿಂತನೆ ನಡೆಸಿದರೆ, ಕನ್ನಡ ನುಡಿ ತಂತ್ರಾಂಶ ಬೆಳೆವಣಿಗೆಯಾಗುತ್ತದೆ. ಈ ನಿಟ್ಟಿನಲ್ಲಿ ಕಂಪ್ಯೂಟರೀಕರಣದ ತುರ್ತು ಅಗತ್ಯವಿದೆಯೆಂದರು.
ಕನ್ನಡ ಭಾಷೆ ಮಡಿ- ಮೈಲಿಗೆ ಬಿಟ್ಟು ಎಲ್ಲ ಭಾಷೆಗಳಿಂದ ಪದಗಳನ್ನು ಸ್ವೀಕರಿಸಿ ಕನ್ನಡೀಕರಣಗೊಳಿಸಿಕೊಳ್ಳಬೇಕು ಎಂದ ಅವರು, ಸಾಹಿತ್ಯ ಅಧ್ಯಯನ ಮತ್ತು ತಿಳುವಳಿಕೆಯಿಂದ ಮನುಷ್ಯ ಮನುಷ್ಯನಾಗುವ ಅವಕಾಶಗಳು ಸಿಗುತ್ತವೆ ಎಂದು ಕಿವಿಮಾತು ಹೇಳಿದರು.
ಬಿಎಸ್‌ಎನ್‌ಎಲ್ ಉಪ ಮಹಾ ಪ್ರಬಂಧಕರಾದ ಪ್ರಭಾಕರ್ ಮತ್ತು ಸೋಮಣ್ಣ ಮಾತನಾಡಿದರು. ಮನರಂಜನಾ ಕೂಟದ ಕಾರ್ಯದರ್ಶಿ ಎ.ಡಿ. ಗೋವಿಂದಪ್ಪ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement