ಅನ್ನಪೂರ್ಣೇಶ್ವರಿ ಸನ್ನಿಧಿಯಲ್ಲಿ ಲಕ್ಷ ದಿಪೋತ್ಸವ
ಮೂಡಿಗೆರೆ: ತಾಲೂಕಿನ ಶ್ರೀ ಕ್ಷೇತ್ರ ಹೊರನಾಡು ಆಧಿಶಕ್ತ್ಯಾತ್ಮಕ ಅನ್ನಪೂರ್ಣೇಶ್ವರಿ ದೇವಾಲಯದಲ್ಲಿ ಕಾರ್ತಿಕ ಮಾಸದ ಲಕ್ಷ ದೀಪೋತ್ಸವ, ಪುಷ್ಪಕ ರಥೋತ್ಸವ, ಪಲ್ಲಕ್ಕಿ ಉತ್ಸವ ವಿಜೃಂಭಣೆಯಿಂದ ನೆರವೇರಿತು.
ಪ್ರತಿ ವರ್ಷದಂತೆ ಈ ವರ್ಷವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಂಡ ದೀಪೋತ್ಸವದಲ್ಲಿ ರಾಜ್ಯದ ನಾನಾ ಭಾಗಗಳಿಂದ ಭಕ್ತರು ಆಗಮಿಸಿ ಪುನಿತರಾದರು.
ದೀಪೋತ್ಸವದ ಅಂಗವಾಗಿ ಬೆಳಿಗ್ಗೆ ಗೋಕರ್ಣ ಮಂಡಲಾಧೀಶ ರಾಮಚಂದ್ರಪುರ ಮಠಾಧೀಶ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿಗಳಿಂದ ಶ್ರೀ ಗುರು ಬಿಕ್ಷಾಂಗ ಪಾದುಕಾ ಪೂಜೆ ಹಾಗೂ ಗೋಪೂಜಾ ನಡೆಯಿತು. ಬೆಳಿಗ್ಗೆ 11ಕ್ಕೆ ಶ್ರೀ ಮಾತೆಯ ಸನ್ನಿದಿಯಲ್ಲಿ ಕೋಟಿ ಕುಂಕುಮಾರ್ಚನೆ ಕಾರ್ಯಕ್ರಮ ಜರುಗಿತು.
ಸಂಜೆ ಶ್ರೀಗಳಿಂದ ಪಟ್ಟದ ದೇವರುಗಳ ಪೂಜೆ ನಡೆಯಿತು. ರಾತ್ರಿ ಲಕ್ಷದೀಪೂತ್ಸವಕ್ಕೆ ಚಾಲನೇ ನೀಡಿದರು.
ದೇಗುಲದ ಧರ್ಮಕರ್ತ ಡಾ.ಜಿ. ಭೀಮೇಶ್ವರ ಜೋಷಿ ಅವರು ಪಲ್ಲಕ್ಕಿ ಉತ್ಸವಕ್ಕೆ ಚಾಲನ ನೀಡಿದರು. ರಾಜಲಕ್ಷ್ಮೀ ಭೀಜೋಷಿ, ಮಾತೃರ್ಷಿ ಸರಸ್ವತಮ್ಮ ಜಿ. ಜೋಯಿಸ್ ಕುಟುಂಬಸ್ಥರು ಪಾಲ್ಗೊಂಡಿದ್ದರು.