ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಬರಪೀಡಿತ ಪ್ರದೇಶ ಕಡೆಗಣನೆ: ರೇವಣ್ಣ ಆರೋಪ

Lingaraj Badiger
Updated On : 23 Nov 2013, 10:41 am

ಕ.ಪ್ರ.ವಾರ್ತೆ, ಕಡೂರು, ನ. 22
ತಾಲೂಕಿನ ಜನರಿಗೆ ಕುಡಿಯಲು ಮತ್ತು ಕೃಷಿಗೆ ಅಗತ್ಯವಾದ ಶಾಶ್ವತ ನೀರಾವರಿ ಯೋಜನೆಗಳನ್ನು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಹಾಗೂ ಶಾಸಕ ವೈಎಸ್ವಿ ದತ್ತ ಅವರು ಹೋರಾಟ ಮಾಡಿಯಾದರೂ ತರುತ್ತಾರೆ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಹೇಳಿದರು.
ಕಡೂರು ಹಾಗೂ ಬೀರೂರು ಮಧ್ಯೆ ಇರುವ ಹಾಲು ಶೀಥಲೀಕರಣ ಘಟಕದಲ್ಲಿ ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಯ ಹಾಲು ಉತ್ಪಾದಕ ಸಹಕಾರ ಸಂಘಗಳ ಕುಂದುಕೊರತೆ ಸಭೆ ಉದ್ಘಾಟಿಸಿ ಮಾತನಾಡಿದರು.
ರಾಜ್ಯದ ಅನೇಕ ತಾಲೂಕುಗಳು ಬರದಿಂದ ತತ್ತರಿಸುತ್ತಿರುವ ಬಗ್ಗೆ ಕಾಂಗ್ರೆಸ್ನವರು ಮಾತನಾಡುತ್ತಿಲ್ಲ. ಆದರೆ, ಅವರಿಗೆ 9 ವರ್ಷದಿಂದ ಅಧಿಕಾರವಿಲ್ಲದ ಬರ ನೀಗಿಸಿಕೊಳ್ಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಕಡೂರು ತಾಲೂಕು ಬರಕ್ಕೆ ತುತ್ತಾಗಿದ್ದು, ಶಾಸಕರಾದ ದತ್ತ ಅವರು ಈಗಾಗಲೇ ಮುಖ್ಯಮಂತ್ರಿಗಳ ಗಮನ ಸೆಳೆದು ಬರಪೀಡಿತ ಪಟ್ಟಿಗೆ ತಾಲೂಕನ್ನು ಸೇರಿಸಲು ಸರ್ಕಾರವನ್ನು ಆಗ್ರಹಿಸಿದ್ದು, ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಲಿದ್ದಾರೆ ಎಂದರು.
ಪ್ರೋತ್ಸಾಹ: ಚಿಕ್ಕಮಗಳೂರು ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ನೀಡಲಿ. ನಮ್ಮ ಅಭ್ಯಂತರ ಏನೂ ಇಲ್ಲ. ಕೆಲವರು ಪತ್ರಿಕೆಗಳಲ್ಲಿ ಪ್ರಚಾರ ಪಡೆಯಲು ಅನಾವಶ್ಯಕವಾಗಿ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಅಂಥವರು ಸಹಕಾರ ನೀಡುವ ಮನೋಭಾವ ಇದ್ದರೆ 15 ಎಕರೆ ಭೂಮಿಯನ್ನು ಜಿಲ್ಲಾಧಿಕಾರಿಗಳಿಂದ ಮಂಜೂರು ಮಾಡಿಸಿಕೊಂಡು ಕೇಳಲಿ, ಮಾಡಿಕೊಡುತ್ತೇವೆ ಎಂದು ತಮ್ಮ ವಿರೋಧಿಗಳಗೆ ಕುಟುಕಿದರು.
ರಾಜಕೀಯ ಬಿಡಲಿ: ಹಾಸನ ಹಾಲು ಒಕ್ಕೂಟದ ಅಧ್ಯಕ್ಷ ಎಸ್.ಎಲ್. ಧರ್ಮೇಗೌಡ ಮಾತನಾಡಿ, ಚಿಕ್ಕಮಗಳೂರು ಜಿಲ್ಲೆಯನ್ನು ಹಾಸನ ಹಾಲು ಒಕ್ಕೂಟದಿಂದ ಬೇರ್ಪಡಿಸುವ ವಿಷಯದಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ದೂರುತ್ತಿರುವ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದವರು ಮೊದಲು ರಾಜಕೀಯ ಬಿಡಲಿ ಎಂದರು.
ಹಾಸನ ಹಾಲು ಒಕ್ಕೂಟದ ನಿರ್ದೇಶಕ ಕೋಡಿಹಳ್ಳಿ ಮಹೇಶ್ವರಪ್ಪ, ರಾಮಪ್ಪ, ವ್ಯವಸ್ಥಾಪಕ ನಿರ್ದೇಶಕ ಗೋಪಾಲಯ್ಯ, ಶೀಥಲೀಕರಣ ಘಟಕದ ವ್ಯವಸ್ಥಾಪಕ ಶ್ರೀನಾಥ್ ಸೇರಿದಂತೆ ತರೀಕೆರೆ, ಕಡೂರು ತಾಲೂಕುಗಳ ಹಾಲು ಉತ್ಪಾದಕರ ಸಂಘಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳೊಂದಿಗೆ ಸಂವಾದ ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement