ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

'ಮಹಿಳೆಯರು ಶಿಕ್ಷಣ ಪಡೆಯಲು ಮುಂದಾಗಲಿ'

Lingaraj Badiger
Updated On : 23 Nov 2013, 10:35 am

ಕ.ಪ್ರ. ವಾರ್ತೆ  ತರೀಕೆರೆ  ನ.22
ಮಹಿಳೆಯರು ಶಿಕ್ಷಣ ಪಡೆಯಬೇಕು ಎಂದು ಉಪವಿಭಾಗಾಧಿಕಾರಿ ಅನುರಾಧ ತಿಳಿಸಿದರು.
ಪಟ್ಟಣಕ್ಕೆ ಕಾನೂನು ರಥ ಆಗಮಿಸಿದ ಅಂಗವಾಗಿ, ತಾಲೂಕು ಕಾನೂನು ನೆರವು ಸಮಿತಿ, ವಿವಿಧ ಇಲಾಖೆಗಳ ವತಿಯಿಂದ ಸಮೀಪದ ಇಟ್ಟಿಗೆ ಗ್ರಾಮದಲ್ಲಿ ನಡೆದ ಕಾನೂನು ಅರಿವು ನೆರವು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಮಹಿಳೆಯರು ಶಿಕ್ಷಣ ಹೊಂದಬೇಕು. ಶಿಕ್ಷಿತರಾದರೆ ಕಾನೂನು ಅರಿವು ತಾನಾಗಿಯೇ ಬರುತ್ತದೆ. ಮಕ್ಕಳನ್ನು ದುಡಿಮೆಗೆ ಕಳಿಸುವುದಾಗಲಿ, ದುಡಿಸಿಕೊಳ್ಳುವುದಾಗಲಿ ಮಾಡಬೇಡಿ. ಇದು ಕಾನೂನಿಗೆ ವಿರುದ್ಧ ಎಂದು ತಿಳಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶರಾದ ಹಿದಾಯುತ್ಉಲ್ಲಾ ಷರೀಫ್ ಮಾತನಾಡಿ, ಗ್ರಾಮಾಂತರ ಜನರಿಗೆ ಸರ್ಕಾರ ವಿಶೇಷ ಸವಲತ್ತು ಸೌಲಭ್ಯ ನೀಡಿದೆ.
ಇಂತಹ ಸೌಲಭ್ಯಗಳಿಂದ ಕೆಲವರು ವಂಚಿತರಾಗುತ್ತಿದ್ದಾರೆ. ಇದಕ್ಕೆ ಕೆಲವು ಕಾನೂನು ತೊಡಕುಗಳು ಕಾರಣವಾಗಿದೆ. ಗ್ರಾಮೀಣ ಭಾಗದ ಜನರಿಗೆ ಕಾನೂನಿನ ಬಗ್ಗೆ ಅರಿವು ಮತ್ತು ಜಾಗೃತಿ ಮೂಡಿಸಲು ಇಂತಹ ಕಾರ್ಯಕ್ರಮಗಳನ್ನು ಸರ್ಕಾರ ಹಮ್ಮಿಕೊಂಡಿದ್ದು, ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಕಿರಿಯ ಸಿವಿಲ್ ನ್ಯಾಯಾಧೀಶರಾದ ಜಯಲಕ್ಷ್ಮಿ ಮಾತನಾಡಿ, ಕಾನೂನು ರಥಯಾತ್ರೆ ಮೂರು ದಿನಗಳ ಕಾಲ ತಾಲೂಕಿನಾದ್ಯಂತ ಸಂಚರಿಸಲಿದ್ದು, ನುರಿತ ವಕೀಲರು ಹಲವು ಕಾನೂನು ವಿಷಯ ಕುರಿತು ಉಪನ್ಯಾಸ ನೀಡಲಿದ್ದು, ಗ್ರಾಮೀಣ ಜನತೆ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ವಕೀಲರ ಸಂಘದ ಅಧ್ಯಕ್ಷ ಶಿವಪ್ರಸಾದ್, ಸರ್ಕಾರಿ ಅಭಿಯೋಜಕ ಭಾಸ್ಕರ್, ಇಒದೇವರಾಜ್ ಮತ್ತಿತರರು ಮಾತನಾಡಿದರು. ವಕೀಲರಾದ ಎಸ್. ಸುರೇಶ್ ಚಂದ್ರ, ಎಂ.ಕೆ. ತೇಜಮೂರ್ತಿ, ಲೋಹಿತ್, ಮಂಜುನಾಥ್ ಅವರು ವಿವಿಧ ವಿಷಯ ಕುರಿತು ಉಪನ್ಯಾಸ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement