ರೈಲು ನಿಲ್ದಾಣಕ್ಕೆ ವೀಲ್ಚೇರ್ ಕೊಡುಗೆ
ಚಿಕ್ಕಮಗಳೂರು: ಜೈನ ಶ್ವೇತಾಂಬರ ತೇರಾಪಂಥ ಮಹಿಳಾ ಮಂಡಳದಿಂದ ಆಚಾರ್ಯ ತುಳಸೀ ಜನ್ಮ ಶತಮಾನೋತ್ಸವದ ಅಂಗವಾಗಿ ವೀಲ್ಚೇರನ್ನು ಚಿಕ್ಕಮಗಳೂರು ರೈಲು ನಿಲ್ದಾಣಕ್ಕೆ ಕೊಡುಗೆ ನೀಡಲಾಯಿತು. ಜಿಲ್ಲಾ ಕೇಂದ್ರಕ್ಕೆ ರೈಲು ಸಂಪರ್ಕ ಬೇಕೆಂಬ ಶತಮಾನಗಳ ಕನಸು ಈಡೇರಿದ್ದು, ಗುರೂಜಿ ಸ್ಮರಣಾರ್ಥ ಸುಮಾರು ರು. 4,000 ಬೆಲೆಯ ವಿಶಿಷ್ಟ ಕುರ್ಚಿಯನ್ನು ವಿಕಲಚೇತನ ಪ್ರಯಾಣಿಕರ ಅನುಕೂಲಕ್ಕಾಗಿ ರೇಲ್ವೆ ಅಧಿಕಾರಿಗಳಿಗೆ ನೀಡುತ್ತಿರುವುದಾಗಿ ಮಹಿಳಾ ಮಂಡಳಿ ಅಧ್ಯಕ್ಷೆ ಮಂಜುಬಾಯಿ ಬನ್ಸಾಲಿ ಈ ಸಂದರ್ಭದಲ್ಲಿ ತಿಳಿಸಿದರು. ಶಾಸಕ ಸಿ.ಟಿ. ರವಿ, ಕಮಲಾಬಾಯಿ, ಶಕುಂತಲಾ, ಭಾಗ್ಯವತಿ, ಖಜಾಂಚಿ ಚಂದ್ರಾ ಗಾದಿಯಾ, ಗೌತಮಚಂದ್ ಸಿಯಾಲ್ ಉಪಸ್ಥಿತರಿದ್ದರು.