ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

'ಸತ್ಸಂಗದಿಂದ ನೆಮ್ಮದಿ'

Lingaraj Badiger
Updated On : 23 Nov 2013, 10:35 am

ಬಾಳೆಹೊನ್ನೂರು: ದೇವರ ಸಂತ್ಸಂಗ ಕಾರ್ಯಕ್ರಮಗಳು ಮನಸ್ಸಿಗೆ ಶಾಂತಿ, ನೆಮ್ಮದಿಯನ್ನು ನೀಡುತ್ತವೆ ಎಂದು ಚಿಕ್ಕಮಗಳೂರಿನ ಸಾಯಿ ಏಂಜಲ್ಸ್ ಸಂಸ್ಥಾಪಕ ನಾಗೇಶ್ ಹೇಳಿದ್ದಾರೆ.
ಇಲ್ಲಿಗೆ ಸಮೀಪದ ವೀರಭದ್ರೇಶ್ವರನಗರದ ಎಂ.ಪಿ. ಅವರ ಮನೆಯಂಗಳದಲ್ಲಿ ಸರ್ವಧರ್ಮ ಸದ್ಗುರು ಶಿರಡಿ ಸಾಯಿಬಾಬಾ ಸಂಘ ಆಯೋಜಿಸಿದ್ದ ಸತ್ಸಂಗ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸತ್ಸಂಗ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರೂ ಪಾಲ್ಗೊಂಡು ದೇವರ ಧ್ಯಾನ ಮಾಡಬೇಕು. ನಮ್ಮಲ್ಲಿರುವ ನಂಬಿಕೆಯೇ ದೇವರಾಗಿದ್ದು, ದೇವರ ಭಜನೆ, ಧ್ಯಾನ ಮಾಡುವ ಮನಸ್ಸು ವಿಭಜನೆಯಾಗುವುದಿಲ್ಲ. ಶ್ರದ್ಧೆ, ಭಕ್ತಿಯಿಂದ ಆಧ್ಯಾತ್ಮಿಕ ಚಿಂತನೆಯಲ್ಲಿ ತೊಡಗಿಸಿಕೊಂಡು ದೇವರ ಸ್ಮರಣೆ ಮಾಡಿದರೆ ಮಾನವ ಜನ್ಮಕ್ಕೆ ಮೋಕ್ಷ ಲಭಿಸುತ್ತದೆ ಎಂದರು.
ಚಿಕ್ಕಮಗಳೂರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವ್ಯವಸ್ಥಾಪಕ ಶಿವನಾಗಪ್ಪ ಮಾತನಾಡಿ, ಶಿರಡಿ ಸಾಯಿಬಾಬಾ ಅವರ ಆದರ್ಶ ಗುಣಗಳನ್ನು ಜೀವನದಲ್ಲಿ ಮೈಗೂಡಿಸಿಕೊಂಡು ಉತ್ತಮ ವ್ಯಕ್ತಿಗಳಾಗಬೇಕು. ಶಿರಡಿ ಧ್ಯಾನ, ದರ್ಶನದಿಂದ ಜೀವನದಲ್ಲಿ ಬಹುಪುಣ್ಯ ಲಭಿಸುತ್ತದೆ ಎಂದು ಹೇಳಿದರು.
ಪ್ರತಿಮಾ ಮತ್ತು ಸಂಗಡಿಗರು ಶಿರಡಿ ಸಾಯಿ ಕುರಿತಾದ ಹರಿಕಥಾಭಾಗವನ್ನು ನಡೆಸಿಕೊಟ್ಟರು. ಕಾರ್ಯಕ್ರಮ ಆಯೋಜಕ ಎಂ.ಪಿ. ರವಿ, ಸುಜಯಾ ರವಿ,  ರಘು, ಎಲ್.ಪಿ. ಜಗದೀಶ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement