ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ನಶಿಸುತ್ತಿರುವ ಜೀವನ ಮೌಲ್ಯ: ದೀಕ್ಷಿತ್ ಆತಂಕ

Vishwanath S
Updated On : 24 Nov 2013, 3:04 am

ಕ.ಪ್ರ.ವಾರ್ತೆ, ಬೀರೂರು, ನ.23
ಮೂರನೇ ವರ್ಷದ ಶ್ರೀ ದುರ್ಗಾ ಸಪ್ತಶತಿ ಚಂಡಿಕಾ ಹೋಮ,  ಶ್ರೀ ಜಗದ್ಗುರು ರೇಣುಕಾಚಾರ್ಯರ ಕಾರ್ತಿಕ ದೀಪೋತ್ಸವ, 172ನೇ ಸಂಕಷ್ಟ ಹರ ಚತುರ್ಥಿ ಶ್ರೀ ಜಗದ್ಗುರು ರೇಣುಕ ಸಂಘದ 15ನೇ ವಾರ್ಷಿಕೋತ್ಸವ ಹಾಗೂ ಧರ್ಮ ಜಾಗೃತಿ ಸಮಾರಂಭವು ಪಟ್ಟಣದ ರಂಭಾಪುರಿ ಖಾಸಾ ಶಾಖಾ ಪೀಠದಲ್ಲಿ ನಡೆಯಿತು.
ಮೈಸೂರಿನ ಜ್ಯೋತಿಷಿ ಮಧು ದೀಕ್ಷಿತ್ ಕಾರ್ತಿಕ ಮಾಸದ ವಿಶೇಷತೆ, ಸೂರ್ಯನ ಜಲತತ್ವದ ಪ್ರವೇಶದ ಮಾಹಿತಿ ಹಾಗೂ ಜಗತ್ತಿಗೆ ಬೆಳಕು ನೀಡುವ ರವಿಗೆ ಕೃತಜ್ಞತಾ ಸೂಚಕವಾಗಿ ದೀಪೋತ್ಸವದ ಆಚರಣೆ ಮೂಲಕ ಸ್ಮರಣೆ ಮಾಡಿಕೊಳ್ಳುವ ಮಾಹಿತಿ ನೀಡಿದರು.
ಆಶೀರ್ವಚನ ನೀಡಿದ ಶಿವಮೊಗ್ಗ ಬಿಳಕಿ ಮಠದ ರಾಚೋಟೇಶ್ವರ ಶಿವಾಚಾರ್ಯರು ಧರ್ಮವೇ ಜಗದ ಮೂಲ, ಧರ್ಮವೇ ಬಾಳಿನ ಸೂತ್ರವಾಗಿದ್ದು, ನಂಬಿದವರಿಗೆ ಕಲ್ಲೇ ದೇವರು, ನಂಬದವರಿಗೆ ದೇವರೇ ಕಲ್ಲು. ಇಂದು ಸಂಸ್ಕಾರಯುತ ಜೀವನ ಮೌಲ್ಯ ನಶಿಸುತ್ತಿದ್ದು ಹೆತ್ತ ತಂದೆ ತಾಯಿಯನ್ನು ವೃದ್ಧಾಶ್ರಮಕ್ಕೆ ಸೇರಿಸಿ 1 ಲಕ್ಷ ಕೊಟ್ಟು ನಾಯಿ ತಂದು ಮನೆಯಲ್ಲಿ ಸಾಕುವ ಜಾಯಮಾನ ಬೆಳೆಸಿಕೊಂಡಿರುವುದು ಕೌಟುಂಬಿಕ ಆಶಯಗಳ ಅಧಃಪತನದ ದ್ಯೋತಕವೇ ಸರಿ. ಇದು ಭಾರತೀಯ ಸಂಸ್ಕೃತಿಗೆ ಶೋಭೆ ತರುವ ಲಕ್ಷಣವಲ್ಲ ಎಂದರು.  
ಅಧ್ಯಕ್ಷತೆ ವಹಿಸಿದ್ದ ಬೀರೂರು ಖಾಸಾ ಪೀಠದ ಶ್ರೀ ರುದ್ರಮುನಿ ಶಿವಾಚಾರ್ಯರು ಶ್ರದ್ಧೆ, ಭಕ್ತಿ ಮನಸ್ಸಿಗೆ ಶಕ್ತಿ ತುಂಬುತ್ತದೆ. ಉತ್ತಮ ಭಾವನೆಗಳನ್ನು ಬಿತ್ತುವ ಬೆಸುಗೆಯ ಕೆಲಸ ಮಾನವೀಯ ಮೌಲ್ಯ ಉಳಿಸುವಿಕೆ ದಿಸೆಯಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಆಚರಣೆ  ಹಾಗು ಪಾಲ್ಗೊಳ್ಳುವಿಕೆ ಅತ್ಯಂತ ಅಗತ್ಯವಾಗಿ ಆಗಬೇಕಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಜಿಪಂ ಮಾಜಿ ಅಧ್ಯಕ್ಷ ಬೆಳ್ಳಿ ಪ್ರಕಾಶ್, ಹಾರನಹಳ್ಳಿ ರಾಮಲಿಂಗೇಶ್ವರ ಪೀಠದ ಶಿವಯೋಗೀಶ್ವರ ಶಿವಾಚಾರ್ಯರು ಮಾತನಾಡಿದರು.
ಪುರಸಭಾ ಸದಸ್ಯರಾದ ರೇಣುಕಾರಾಧ್ಯ, ಮಾರ್ಗದ ಮಧು, ಶರತ್, ವಿಜಯೇಂದ್ರ ಬಾಬು, ಶಿವಪ್ರಸಾದ್, ಮಂಜುನಾಥ್, ಗುರಬಸವಯ್ಯ ಇವರಿಗೆ ಗುರುರಕ್ಷೆ ನೀಡಿ ಗೌರವಿಸಲಾಯಿತು.
ರೇಣುಕಾ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಡಿ.ಎಂ. ಮಂಜುನಾಥ್, ಉಪಾಧ್ಯಕ್ಷ ಪ್ರಭುಕುಮಾರ್, ಎಂ.ಆರ್. ಯೋಗೀಶಾರಾದ್ಯ, ಎಂ. ಆರ್. ಪುಷ್ಪಕುಮಾರ್, ಎಂ.ಎಂ. ವಿಶ್ವಾರಾಧ್ಯ, ಗಿರಿಧರ್, ಚಂದ್ರಶೇಖರಯ್ಯ ಹಾಗೂ ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement