ಶಿಕ್ಷಕರನ್ನು ವೃತ್ತಿಗೆ ಸೀಮಿತಗೊಳಿಸಿ
ನರಸಿಂಹರಾಜಪುರ: ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ, ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಶಿಕ್ಷಕರಿಗಾಗಿ ತಾಲೂಕು ಮಟ್ಟದ ಸಹಪಠ್ಯ ಚಟುವಟಿಕೆಗಳ ಸ್ಪರ್ಧೆಯು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಆವರಣದಲ್ಲಿ ಶನಿವಾರ ನಡೆಯಿತು.
ತಾಲೂಕು ದೈಹಿಕ ಪರಿವೀಕ್ಷಕ ಕೆ. ಮೌನೇಶ್ವರಾಚಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಿಕ್ಷಕರು ಸಹ ಪಠ್ಯ ಚಟುವಟುಕೆಗಳಲ್ಲಿ ಭಾಗವಹಿಸುವುದರಿಂದ ಹೆಚ್ಚು ಕ್ರಿಯಾಶೀಲರಾಗಬಹುದು ಎಂದರು.
ವೃತ್ತಿಗೆ ಸೀಮಿತಗೊಳಿಸಿ: ಮುಖ್ಯ ಅತಿಥಿಗಳಾಗಿದ್ದ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಕೆ. ಗುರುಶಾಂತಪ್ಪ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ಶಿಕ್ಷಕರಿಗೆ ತರಬೇತಿ, ಮೀಟಿಂಗ್ಗಳೇ ಹೆಚ್ಚಾಗುತ್ತಿದ್ದು, ತಮ್ಮ ಶಾಲೆಗಳಲ್ಲಿ ಮಕ್ಕಳಿಗೆ ಬೋಧನೆ ಮಾಡುವುದಕ್ಕೆ ಹೆಚ್ಚು ಸಮಯವೇ ಸಿಗುತ್ತಿಲ್ಲ. ಸರ್ಕಾರವು ಶಿಕ್ಷಕರನ್ನು ಶಿಕ್ಷಣ ವೃತ್ತಿಗೆ ಸೀಮಿತಗೊಳಿಸಬೇಕು ಎಂದು ಮನವಿ ಮಾಡಿದರು.
ವೇದಿಕೆಯಲ್ಲಿ ತಾಲೂಕು ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎ.ಬಿ. ಚಂದ್ರಪ್ಪ, ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಂಪನ್ಮೂಲ ವ್ಯಕ್ತಿ ಎಸ್.ಕೆ. ಪ್ರಸನ್ನ ಉಪಸ್ಥಿತರಿದ್ದರು. ವಿಜೇತರು: ಪ್ರಾಥಮಿಕ ಶಾಲಾ ವಿಭಾಗ- ಗಾಯನ ಸ್ಪರ್ಧೆ- ಪ್ರಥಮ ಗೌರಮ್ಮ, ಆಶುಭಾಷಣ ಸ್ಪರ್ಧೆ ಪ್ರಥಮ- ಬಿ.ಟಿ. ವಿಜಯಕುಮಾರ್, ದ್ವಿತೀಯ- ಮೋಹನರಾಜ್. ಪ್ರಬಂಧ ಸ್ಪರ್ಧೆ- ಪ್ರಥಮ ಸುನೀಲ್ಕುಮಾರ್, ದ್ವಿತೀಯ- ಸುಭಾಷ್, ತೃತೀಯ- ಮಲ್ಲಿಕಾರ್ಜುನ, ಪೀಠೋಪಕರಣ ತಯಾರಿಕೆ ಸ್ಪರ್ಧೆ- ಪ್ರಥಮ ಎಚ್.ಸಿ. ಬಸವರಾಜ್, ದ್ವಿತೀಯ ಜಿ. ಈಶ. ಚಿತ್ರಕತೆ ಸ್ಪರ್ಧೆ ಪ್ರಥಮ ಮಂಜುನಾಥ್, ದ್ವಿತೀಯ ಚಂದ್ರಶೇಖರ್.
ಪ್ರೌಢಶಾಲೆ ವಿಭಾಗ: ಗಾಯನ ಸ್ಪರ್ಧೆ- ಪ್ರಥಮ ಎಸ್. ಪುಷ್ಪ, ದ್ವಿತೀಯ- ಎಚ್.ಸಿ. ಪ್ರಕಾಶ್, ತೃತೀಯ ಎನ್.ಯು. ಕಲ್ಮುರುಡಪ್ಪ. ಆಶು ಭಾಷಣ ಸ್ಪರ್ಧೆ- ಪ್ರಥಮ ಕೆ.ಎಂ. ರಾಘವೇಂದ್ರ, ದ್ವಿತೀಯ- ಶಂಕರಮೂರ್ತಿ, ಪ್ರಬಂಧ ಸ್ಪರ್ಧೆ ಪ್ರಥಮ- ಎನ್. ಪ್ರಭುಗೌಡ, ದ್ವಿತೀಯ ಯು.ಯು.ದೇವರಾಜ, ತೃತೀಯ ಬಿ.ಆರ್. ಭದ್ರೇಗೌಡ, ಪಾಠೋಪಕರಣ ತಯಾರಿಕೆ ಸ್ಪರ್ಧೆ ಪ್ರಥಮ ಕೆ. ಅಂಬಿಕಾ.