ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಕನ್ನಡದ ದೇಶೀಯ ಪದಗಳ ಬಳಕೆ ಹೆಚ್ಚಾಗಲಿ

Lingaraj Badiger
Updated On : 25 Nov 2013, 10:56 am

ಕ.ಪ್ರ.ವಾರ್ತೆ, ತರೀಕೆರೆ.ನ.24.
ಜಾಗತಿಕ ಜ್ಞಾನವು ಎಲ್ಲ ಕಡೆಯಿಂದ ಹರಿದು ಬರಬೇಕು. ಅದನ್ನು ಕನ್ನಡದಲ್ಲಿ ಅರಗಿಸಿಕೊಳ್ಳಬೇಕು ಎಂದು ಭದ್ರಾವತಿ ಆಕಾಶವಾಣಿ ಮುಖ್ಯ ಕಾರ್ಯ ನಿರ್ವಾಹಕ ಡಾ.ಎ.ಎಸ್. ಶಂಕರನಾರಾಯಣ್ ತಿಳಿಸಿದ್ದಾರೆ.
ಅವರು, ಭಾನುವಾರ  ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಪಟ್ಟಣದ ಲತಾ ಎಚ್.ಸಿ.ಗೋಪಾಲಕೃಷ್ಣ ಅವರ ನಿವಾಸದಲ್ಲಿ ಏರ್ಪಾಡಾಗಿದ್ದ ರಾಜ್ಯೋತ್ಸವ-ನಿತ್ಯೋತ್ಸವದಲ್ಲಿ ವಿನೂತನವಾದ ಪ್ರಯೋಗ  ಕನ್ನಡ ನುಡಿ-ಸಂವಾದ ನೆಡೆಸಿ ಮಾತನಾಡುತ್ತಿದ್ದರು.
ದೇಶೀಯ ಪದ: ಬೆಳಕು ಎಲ್ಲ ಕಡೆಯಿಂದ ಬರಬೇಕು, ಬೆಳಕು ಕನ್ನಡದ ದೀಪವಾಗಿ ಬೆಳಗಬೇಕು, ಜ್ಞಾನ ಎಲ್ಲ ಕಡೆಯಿಂದ ಬರಲಿ. ಟಿ.ಎಸ್.ವೆಂಕಣ್ಣಯ್ಯನವರು ಕನ್ನಡದ ಮೊದಲ ಪ್ರಾಧ್ಯಾಪಕರು. ಕನ್ನಡ ಬೆಳೆಸುವಲ್ಲಿ ದೊಡ್ಡ ಮಟ್ಟದ ಚಿಂತನೆ ಆಗಬೇಕಿದೆ. ಕನ್ನಡ ಭಾಷೆಯಲ್ಲಿ ಅತ್ಯಧಿಕವಾದ ಅಪ್ಪಟ ದೇಶೀಯ ಪದಗಳು ಇವೆ. ಇವುಗಳನ್ನು ಬಳಸಿ ಬೆಳಸಬೇಕು ಎಂದು ಅವರು ತಿಳಿಸಿದರು.
ಎಚ್.ಸಿ.ಗೋಪಾಲಕೃಷ್ಣ ಅವರು ಮಾತನಾಡಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ವರ್ಷಪೂರ್ತಿ ಕನ್ನಡ ನಿತ್ಯೋತ್ಸವ ಕಾರ್ಯಕ್ರಮಗಳನ್ನು ಅತ್ಯಧಿಕ ಸಂಖ್ಯೆಯಲ್ಲಿ ಪ್ರತಿಯೊಂದು ಮನೆಗಳಲ್ಲಿ ಆಚರಿಸುತ್ತಿರುವುದು ಮೆಚ್ಚತಕ್ಕ ವಿಷಯವಾಗಿದೆ ಎಂದು ತಿಳಿಸಿಗದರು.
ಕೆನರಾ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಶ್ಯಾಮಸುಂದರ್ ಅವರು ಸಮಾರಂಭದ ಉದ್ಘಾಟನೆ ನೆರವೇರಿಸಿ ನಿತ್ಯ ಕನ್ನಡಪರ ಕಾರ್ಯಕ್ರಮಗಳು ಎಲ್ಲಡೆ ನೆಡೆಯಲಿ ಎಂದು ತಿಳಿಸಿದರು.
ವರ್ಷಪೂರ್ತಿ ಕಾರ್ಯಕ್ರಮ: ಕಸಾಪ ಅಧ್ಯಕ್ಷ ಜಿ.ಸುಬ್ರಹ್ಮಣ್ಯ ಅವರು ಮಾತನಾಡಿ ತಾಲೂಕಿನಾದ್ಯಂತ ಇದುವರೆಗೆ 46 ಕನ್ನಡ ಪರ ಅರ್ಥಪೂರ್ಣವಾದ ರಾಜ್ಯೋತ್ಸವ ನಿತ್ಯೋತ್ಸವ ಕಾರ್ಯಕ್ರಮಗಳನ್ನು ನೆಡೆಸಲಾಗಿದೆ. ವರ್ಷಪೂರ್ತಿ ಕಾರ್ಯಕ್ರಮಗಳನ್ನು ನೆಡೆಸಲಾಗುವುದು ಎಂದು ತಿಳಿಸಿದರು.
ಬ್ರಾಹ್ಮಣ ಸೇವಾ ಸಮಿತಿ ಅಧ್ಯಕ್ಷ ಎ.ವಿ.ನಾಗಭೂಷಣ್, ಲತಾ ಗೋಪಾಲಕೃಷ್ಣ ಅವರು ಮಾತನಾಡಿದರು.  
ಕಲಾವಿದೆ ದೀಪ್ತಿ ಚಿನಿವಾರ್ ಅವರಿಂದ ವೀಣಾವಾದನ, ವಿಜಯ ಪ್ರಕಾಶ್, ಸುಮಾ ಶ್ರೀನಿವಾಸ್ ಅವರಿಂದ ಹಾಡುಗಾರಿಕೆ ಮತ್ತು ಶ್ರೀ ಶ್ರೀನಿವಾಸ ಸಂಗೀತ ಪಾಠಶಾಲೆ ಮಕ್ಕಳಿಂದ ಹಾಡುಗಾರಿಕೆ ಏರ್ಪಡಿಸಲಾಗಿತ್ತು.
ಗಂಟೆಗೂ ಹೆಚ್ಟು ಕಾಲ ಕನ್ನಡ ನುಡಿ-ಸಂವಾದ ವಿನೂತನ ಕಾರ್ಯಕ್ರಮ ನೆಡೆಯಿತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.
---
ಇಂಗ್ಲೀಷ್ ಸಂವಹನ: 2 ದಿನ ತರಬೇತಿ ಕಾರ್ಯಾಗಾರ
ಶೃಂಗೇರಿ: ಪಟ್ಟಣದ ಜೆಸಿಬಿಎಂ ಕಾಲೇಜಿನಲ್ಲಿ ಹಳೇ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ದಿ. ತಿಮ್ಮಪ್ಪಗೌಡ ಹೆಗ್ಗದ್ದೆ ಮತ್ತು ಪುಟ್ಟಮ್ಮ ಇವರ ಸ್ಮರಣಾರ್ಥ ಆಂಗ್ಲಭಾಷೆಯಲ್ಲಿ ಸಂವಹನ ಎರಡು ದಿನಗಳ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿತ್ತು.
ತರಬೇತಿ ಕಾರ್ಯಾಗಾರ ನಡೆಸಿಕೊಟ್ಟ ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಇತಿಹಾಸ ವಿಭಾಗದ ನಿವೃತ್ತ ಪ್ರಾದ್ಯಾಪಕ ಪ್ರೊ. ಹೆಚ್.ಎಸ್. ರಾಮಚಂದ್ರ ಮಾತನಾಡಿ, ಆಧುನಿಕ ಕಾಲಘಟ್ಟದಲ್ಲಿ ಆಂಗ್ಲ ಭಾಷೆಯ ಸಮರ್ಥ ತಿಳುವಳಿಕೆ ಅಗತ್ಯ. ಜ್ಞಾನಾಭಿವೃದ್ಧಿಗೆ ಆಂಗ್ಲ ಭಾಷೆ ಅನಿವಾರ್ಯವಾಗಿದೆ. ವ್ಯವಹಾರ ಭಾಷೆಯಾಗಿ ಬಳಸಬೇಕು. ನಮ್ಮ ಸಾಹಿತ್ಯ, ಸಂಸ್ಕೃತಿಯ ಮೇಲೆ ಆಂಗ್ಲ ಭಾಷೆ ಮಹತ್ತರ ಪರಿಣಾಮ ಬೀರಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ನಮ್ಮ ಜ್ಞಾನ ಅಭಿವೃದ್ಧಿಗೆ ಆಂಗ್ಲ ಭಾಷೆಯ ಕಲಿಕೆ ಅನಿವಾರ್ಯವಾಗಿದೆ ಎಂದರು.
ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎಚ್.ಟಿ. ರಮೇಶ್ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಾಚಾರ್ಯ ಹೆಚ್.ಸಿ. ವೀರಪ್ಪಗೌಡ, ಕೆ.ಎಸ್. ವೆಂಕಪ್ಪ, ಎ.ಜಿ. ಪ್ರಶಾಂತ್ ಮತ್ತಿತರರು ಉಪಸ್ಥಿತರಿದ್ದರು.

--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement