ತಾಲೂಕು ಮಟ್ಟದ ಚೆಸ್ ಪಂದ್ಯಾವಳಿ
ಶೃಂಗೇರಿ: ಪಟ್ಟಣದ ಜ್ಞಾನಭಾರತಿ ವಿದ್ಯಾಕೇಂದ್ರದ ಆವರಣದಲ್ಲಿ ತಾಲೂಕು ಮಟ್ಟದ ಚೆಸ್ ಪಂದ್ಯಾವಳಿ ನಡೆಯಿತು. ಜ್ಞಾನಭಾರತಿ ವಿಶ್ವಸ್ಥಮಂಡಳಿಯ ಅಧ್ಯಕ್ಷ ಲಕ್ಷಣ್ ಭಟ್ ಪದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿ, ಚೆಸ್ ಉಪರೂಪದ ಕ್ರೀಡೆಯಾಗಿದೆ. ಇದು ಸರ್ವವ್ಯಾಪಿಯಾಗಬೇಕು. ಈ ಕ್ರೀಡೆಗೆ ಪ್ರೋತ್ಸಾಹ ಅಗತ್ಯವಾಗಿದೆ ಎಂದರು. ಜ್ಞಾನಭಾರತಿ ಚೆಸ್ ಅಕಾಡೆಮಿ ಅಧ್ಯಕ್ಷ ನಂದಕುಮಾರ್ ಸುಂಕುರ್ಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಂಜುನಾಥ್ ಇದ್ದರು.