ಮೋಡ ಕವಿದ ವಾತಾವರಣ
ನರಸಿಂಹರಾಜಪುರ: ಆಂಧ್ರ ಪ್ರದೇಶದಲ್ಲಿ ಕಾಣಿಸಿಕೊಂಡ ಚಂಡಮಾರುತದ ಪರಿಣಾಮವಾಗಿ ಭಾನುವಾರ ಬೆಳಗ್ಗೆಯಿಂದಲೇ ಮಲೆನಾಡು ಭಾಗದಲ್ಲಿ ಮೋಡ, ಆಗಾಗ್ಗೆ ಸಣ್ಣ ಮಳೆಯ ಹನಿಗಳು ಬಿದ್ದಿದ್ದು ಸಂಜೆಯವರೆಗೂ ಮೋಡದ ವಾತಾವರಣ ಮುಂದುವರಿದಿತ್ತು. ತಾಲೂಕಿನಲ್ಲಿ ಅಡಕೆ ಕೊಯ್ಲು, ಗದ್ದೆ ಕೊಯ್ಲು ಪ್ರಾರಂಭಗೊಂಡಿದ್ದು ಮಳೆ, ಮೋಡದ ವಾತಾವರಣದಿಂದ ರೈತರಿಗೆ ಆತಂಕ ಶುರುವಾಗಿದೆ. ಮಳೆ, ಮೋಡದ ವಾತಾವರಣ ಮುಂದುವರಿದರೆ ರಬ್ಬರ್ ಬೆಳೆ ಮೇಲೂ ಪರಿಣಾಮ ಬೀಳಲಿದೆ.