ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

'ಸನ್ಮಾನದಿಂದ ಜವಾಬ್ದಾರಿ ಹೆಚ್ಚು'

Lingaraj Badiger
Updated On : 25 Nov 2013, 10:48 am

ಕ.ಪ್ರ.ವಾರ್ತೆ, ಕಡೂರು,  ನ.24
ಸನ್ಮಾನ, ಗೌರವ ಹೆಚ್ಚಾಂದಂತೆಲ್ಲಾ ಮನುಷ್ಯನ ಜವಾಬ್ದಾರಿಯೂ ಹೆಚ್ಚುತ್ತವೆ ಎಂದು ಸಿದ್ದರಾಮ ಜಯಂತಿ ಮಹೋತ್ಸವ ಸ್ವಾಗತ ಸಮಿತಿ ಅಧ್ಯಕ್ಷ ಡಿ.ವಿ. ಗುರುಪ್ರಸಾದ್ ಹೇಳಿದರು.
ಪಟ್ಟಣದ ಯಳನಡು ಮಠದಲ್ಲಿ ನಡೆದ 841ನೇ ಸಿದ್ದರಾಮ ಜಯಂತಿಯ ಆಚರಣೆ ಪೂರ್ವಭಾವಿ ಸಭೆಯಲ್ಲಿ ಸರ್ಕಾರದ ಆಯುಕ್ತರಾಗಿ ಬಡ್ತಿ ಹೊಂದಿದ ಹಿನ್ನೆಲೆಯಲ್ಲಿ ನೊಣಂಬ ವೀರಶೈವ ನೌಕರರ ಬಳಗ ನೀಡಿದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ಮಾಡಬೇಕಾದ ಕೆಲಸವನ್ನು ಸರಿಯಾಗಿ ಮಾಡಿದರೆ ಅದೇ ನಮ್ಮ ಕರ್ತವ್ಯವನ್ನು ಸರಿಯಾಗಿ ನಿಭಾಯಿಸಿದಂತಾಗುತ್ತದೆ. ಮನುಷ್ಯನು ಸಮಾಜದಲ್ಲಿ ನಿರಪೇಕ್ಷೆ ಇಲ್ಲದೆ ಕೆಲಸ ಮಾಡದೆ ಇರುವ ಸ್ವಾರ್ಥಕತೆ ಹೆಚ್ಚಾಗಿರುವ ಇಂದಿನ ದಿನಗಳಲ್ಲಿ ಸರ್ಕಾರವು ನೀಡಿದ ಜವಾಬ್ದಾರಿ ನಿಭಾಯಿಸುವ ಮೂಲಕ ಕೆಲಸದಲ್ಲಿ ನೆಮ್ಮದಿ ಕಂಡುಕೊಳ್ಳುವ ಕೆಲಸ ಮಾಡಿದ್ದೇನೆ ಎಂದರು.
ಗೌರವ: ಪ್ರಾಸ್ತಾವಿಕವಾಗಿ ನೊಣಂಬ ವೀರಶೈವರ ನೌಕರರ ಬಳಗದ ಅಧ್ಯಕ್ಷ ಭೈರೇಗೌಡ ಮಾತನಾಡಿ, ಪಟ್ಟಣದಲ್ಲಿ ನಡೆಯಲಿರುವ 841ನೇ ಸಿದ್ದರಾಮ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸುವ ಮೂಲಕ ಯಶಸ್ವಿಗೊಳಿಸಲು ಎಲ್ಲೂರು ಕೈಜೋಡಿಸೋಣ ಎಂದರು.
ತಾಲೂಕು ಯುವ ಕುರುಬ ಸಮಾಜದ ಅಧ್ಯಕ್ಷ ಶರತ್ ಕೃಷ್ಣಮೂರ್ತಿ ಮಾತನಾಡಿದರು. ಸಮಿತಿಯ ಪದಾಧಿಕಾರಿಗಳಾದ ಬೆಳ್ಳಿ ಪ್ರಕಾಶ್, ಟಿ.ಆರ್. ಲಕ್ಕಪ್ಪ, ಸೋಮಶೇಖರ್, ದೇವರಾಜ್, ದೇವನೂರು ಮಂಜುನಾಥ್, ಪುರಸಭಾ ಸದಸ್ಯ ಎಂ. ಸೋಮಶೇಖರ್, ಅರೇಹಳ್ಳಿ ಮಲ್ಲಿಕಾರ್ಜುನ್ ಮತ್ತಿತರರು ಮಾತನಾಡಿದರು.
ಯಳನಡು ಮಠದ ಜ್ಞಾನಪ್ರಭು ಸಿದ್ದರಾಮ ದೇಶೀಕೇಂದ್ರ ಸ್ವಾಮೀಜಿ ಅವರು ಸಾನ್ನಿಧ್ಯ ವಹಿಸಿದ್ದರು. ಮಲ್ಲಿಕಾರ್ಜುನ್ ನಿರೂಪಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement