ಹಿರೇಮಠ್ ಕಚೇರಿ ಮೇಲೆ ದಾಳಿ: ಖಂಡನೆ
ಮೂಡಿಗೆರೆ: ಅಕ್ರಮ ಗಣಿಗಾರಿಕೆಯ ವಿರುದ್ಧ ಸಮರ ಸಾರಿರುವ ಸಮಾಜ ಪರಿವರ್ತನಾ ಸಂಘಟನೆಯ ಎಸ್.ಆರ್. ಹಿರೇಮಠ್ ಅವರ ಧಾರವಾಡದ ಕಚೇರಿ ಮೇಲೆ ದಾಳಿ ಮಾಡಿರುವ ಘಟನೆಯನ್ನು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯ ಮೂಡಿಗೆರೆ ಕ್ಷೇತ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಅಲ್ತಾಫ್ ಬಳಗುಳ ತೀವ್ರವಾಗಿ ಖಂಡಿಸಿದ್ದಾರೆ.
ಹಿರೇಮಠ್ರವರು ಈಗಾಗಲೇ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿರುವ ಹಲವಾರು ಗಣಿಧಣಿಗಳ ಮೇಲೆ ಕೇಸು ದಾಖಲಿಸಿ ರಾಜ್ಯದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಜನಾರ್ಧನ ರೆಡ್ಡಿಯಂಥಹ ಪ್ರಮುಖ ವ್ಯಕ್ತಿಗಳನ್ನು ಜೈಲು ಪಾಲು ಮಾಡಿದ್ದಾರೆ.
ರಾಜ್ಯದಲ್ಲಿರುವ ಭ್ರಷ್ಟರನ್ನು ಜೈಲಿಗೆ ಕಳಿಸುವುದರಲ್ಲಿ ಶ್ರಮವಹಿಸುತ್ತಿರುವ ಹಿರೇಮಠ್ರಂತಹ ಸಾಮಾಜಿಕ ಕಾರ್ಯಕರ್ತ ಕಚೇರಿ ಮೇಲೆ ದಾಳಿ ಮಾಡಿದ ಆರೋಪಿಯನ್ನು ಕೂಡಲೇ ಬಂಧಿಸಿ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದ್ದಾರೆ.