'ಕನ್ನಡ ನಾಡು, ನುಡಿ ರಕ್ಷಣೆ ಎಲ್ಲರ ಹೊಣೆ'
ಶೃಂಗೇರಿ: ಶತಶತಮಾನಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆ, ಸಂಸ್ಕೃತಿ, ಪರಂಪರೆಗಳ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಎಂದು ನಿವೃತ್ತ ಕನ್ನಡ ಪ್ರಾಧ್ಯಾಪಕ ಪ್ರೊ.ಮೇಜರ್ ಗಜಾನನ ಎಂ ಭಟ್ ಅಭಿಪ್ರಾಯಪಟ್ಟರು.
ಅವರು ಪಟ್ಟಣದ ಜೆಸಿ ಶಿಕ್ಷಣ ಸಂಸ್ಥೆ ಆವರಣದಲ್ಲಿ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಹಾಗೂ ಹಾಸ್ಯ ಸಿಂಚನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕನ್ನಡ ಕಡೆಗಣನೆ: ಕನ್ನಡ ಭಾಷೆ ಕನ್ನಡಿಗರಿಂದಲೇ ನಿರ್ಲಕ್ಷಕ್ಕೊಳಗಾಗುತ್ತಿದೆ. ಇಂಗ್ಲಿಷ್ ವ್ಯಾಮೋಹದಿಂದ ಕನ್ನಡವನ್ನು ಕಡೆಗಣಿಸಲ್ಪಡುತ್ತಿದೆ. ಪ್ರತಿಯೊಬ್ಬ ಕನ್ನಡಿಗನೂ ಭಾಷಾಭಿಮಾನ ಬೆಳೆಸಿಕೊಳ್ಳಬೇಕು. ಆಗಲೇ ಕನ್ನಡ ಭಾಷೆ,ಸಂಸ್ಕೃತಿ ಬೆಳೆಯಲು ಸಾಧ್ಯ ಎಂದರು.
ಅ.ನ.ಶೃ ಹಾಸ್ಯ ಕಲಾ ಬಳಗದ ಅಧ್ಯಕ್ಷ ಗುತ್ತಳಿಕೆ ಕೇಶವ ಮಾತನಾಡಿದರು. ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನೆಮ್ಮಾರ್ ಅಬೂಬಕರ್ ಕನ್ನಡ ರಾಜ್ಯೋತ್ಸವದ ಕುರಿತು ವಿಶೇಷ ಉಪನ್ಯಾಸ ನೀಡಿದರು. ಮುಖ್ಯ ಅತಿಥಿಗಳಾಗಿ ಕೆ.ಸಿ.ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ನಂತರ ಅ.ನ.ಶೃ ಹಾಸ್ಯ ಕಲಾಬಳಗದ ವತಿಯಿಂದ ಹಾಸ್ಯ ಸಿಂಚನ ಕಾರ್ಯಕ್ರಮ ಆಯೋಜಿಸಲಾಗಿತ್ತು. ರಾಜೇಂದ್ರ ಸ್ವಾಗತಿಸಿ ಸಂತೋಷ್ ಕುಮಾರ್ ನಿರೂಪಿಸಿ ಚಂದ್ರಶೇಖರ್ ವಂದಿಸಿದರು.