ತರಬೇತಿ ಕಾರ್ಯಕ್ರಮ
ಚಿಕ್ಕಮಗಳೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಜಿಲ್ಲಾ ಬಾಲಭವನದಲ್ಲಿ ವಾರ್ಷಿಕ ಚಟುವಟಿಕೆಗಳಾದ ಚಿತ್ರಕಲೆ, ಕರಕುಶಲ, ಜೇಡಿಮಣ್ಣಿನ ಕಲೆ, ರಂಗ ತರಬೇತಿ, ಸಮೂಹ ನೃತ್ಯ, ಸಂಗೀತ, ಕರಾಟೆ ಮತ್ತು ಯೋಗ ತರಬೇತಿಯನ್ನು ನುರಿತ ತರಬೇತಿದಾರರಿಂದ ಪ್ರತಿ ಶನಿವಾರ ಮಧ್ಯಾಹ್ನ ಮತ್ತು ಭಾನುವಾರದ ದಿನಗಳಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ.
ಪ್ರತಿ ಶಿಬಿರಕ್ಕೆ 25 ರಿಂದ 30 ಮಕ್ಕಳ ಸಂಖ್ಯೆ ಕಡ್ಡಾಯ. ಆಸಕ್ತರು 8 ರಿಂದ 16 ವಯೋವುತಿಯ ಮಕ್ಕಳ ಹೆಸರನ್ನು ಬೇಲೂರು ರಸ್ತೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದ್ದು, ನೋಂದಾವಣೆಗೆ ನ.30 ಕೊನೆಯ ದಿನವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು ಹೇಳಿಕೆಯಲ್ಲಿ ತಿಳಿಸಿದ್ದಾರೆ.