ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ವಿದ್ಯಾರ್ಥಿಗಳು ಪ್ರಾಮಾಣಿಕತೆ ಬೆಳೆಸಿಕೊಳ್ಳಿ: ರಾಮಸುಬ್ರಾಯ ಶೇಟ್

Lingaraj Badiger
Updated On : 28 Nov 2013, 11:55 am

ತರೀಕೆರೆ: ವಿದ್ಯಾರ್ಥಿಗಳು ಪ್ರಾಮಾಣಿಕತೆ ಬೆಳೆಸಿಕೊಳ್ಳಬೇಕು ಎಂದು ಚಿಕ್ಕಮಗಳೂರು ಜಿಲ್ಲಾ ಗಮಕ ಪರಿಷತ್ ಅಧ್ಯಕ್ಷ ರಾಮಸುಬ್ರಾಯ ಶೇಟ್ ತಿಳಿಸಿದ್ದಾರೆ.
ಅವರು, ಪಟ್ಟಣದ ಯಶೋಧಮ್ಮ ನಾಗತಿ ಪ್ರೌಢಶಾಲೆಯಲ್ಲಿ ಪಠ್ಯಾಧಾರಿತ ತೊರವೇ ರಾಮಾಯಣದ ವಾತ್ಸಲ್ಯ ಕಾವ್ಯಭಾಗದ ಗಮಕ ಪದ್ಯಗಳ ವಾಚನ ಮತ್ತು ವ್ಯಾಖ್ಯಾನ ಕಾರ್ಯಕ್ರಮದಲ್ಲಿ    ವ್ಯಾಖ್ಯಾನ ಮಾಡಿ ಮಾತನಾಡುತ್ತಿದ್ದರು.
ತಪ್ಪು ಮಾಡಿದ್ದನ್ನು ಒಪ್ಪಿಕೊಳ್ಳುವ ಪ್ರಾಮಾಣಿಕತೆ ಇರಬೇಕು, ಪಾಪಕ್ಕೆ ಪಶ್ಚಾತ್ತಾಪವೇ ಪ್ರಾಯಶ್ಚಿತ್ತ. ಆದರೆ, ಅದರ ಬದಲು ತಪ್ಪನ್ನು ಮುಚ್ಚಿಹಾಕಲು ಪ್ರಯತ್ನಿಸುವುದು ಹೇಯಕೃತ್ಯ, ಶ್ರವಣಕುಮಾರ ತಂದೆ-ತಾಯಿಗಳ ಸೇವೆಯನ್ನು ಹೇಗೆ ನಿಷ್ಠಾವಂತನಾಗಿ ಮಾಡುತ್ತಿದ್ದ ಎಂದರು.
ಇಂದಿನ ಯುವಕರು ವಯಸ್ಸಾದ ತಂದೆ ತಾಯಿಗಳನ್ನು ವೃದ್ಧಾಶ್ರಮಕ್ಕೆ ಕಳುಹಿಸುವುದನ್ನು ಅಥವಾ ಪೋಷಕರಿಗೆ ಗೌರವ ಕೂಡದಿರುವುದನ್ನು ಖಂಡಿಸಿದ ಅವರು, ಧಶರಥ ಚಕ್ರವರ್ತಿಯಾಗಿದ್ದರೂ ತಾನು ಮಾಡಿದ ತಪ್ಪನ್ನು ಸಮರ್ಥಿಸಿಕೊಳ್ಳದೆ, ಹತನಾದ ಶ್ರವಣಕುಮಾರನನ್ನು ಕಾಡಿನಲ್ಲೇ ಬಿಡದೆ, ಶಾಪಕ್ಕೊಳಗಾಗಿ ಮುನಿಗಳ ಅಂತ್ಯಕ್ರಿಯೆ ನಡೆಸಿದ ಔದಾರ್ಯವನ್ನು ಅವರು ಅರ್ಥಪೂರ್ಣವಾಗಿ ವಿವರಿಸಿದರು.
ರಾಮಾಯಣ ಕೇವಲ ನಮ್ಮ ರಾಷ್ಟ್ರಕ್ಕೆ ಮಾತ್ರವೇ ಅಲ್ಲ ಪ್ರಪಂಚಕ್ಕೆ ಮಾರ್ಗದರ್ಶಿ, ಈ ನಿಟ್ಟಿನಲ್ಲಿ ಗಮಕ ಪರಿಷತ್ ಮಕ್ಕಳಲ್ಲಿ ನೈತಿಕ ಪ್ರಜ್ಞೆ ಬೆಳೆಸಲು ಪ್ರಯತ್ನಿಸುತ್ತಿದೆ ಎಂದು ಅವರು ತಿಳಿಸಿದರು. ಪರಿಷತ್ ಸದಸ್ಯ ರವಿಕುಮಾರ್ ಅವರು ಮಾತನಾಡಿ, ವಿದ್ಯಾರ್ಥಿಗಳು ಆದರ್ಶವನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು. ಶಾರದ ಎನ್‌ಮಂಜುನಾಥ್ ಅವರು ಗಮಕ ವಾಚನ ಏರ್ಪಡಿಸಲಾಗಿತ್ತು. ಆರ್.ಜಿ. ಹಿರೇಮಠ್, ಬಿ.ಟಿ. ಶ್ರೀಶೈಲ, ವಿದ್ಯಾರ್ಥಿಗಳು ಸಮಾರಂಭದಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement