ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಕೆಎಸ್ಸಾರ್ಟಿಸಿ ಅಧಿಕಾರಿಗಳ ಧೋರಣೆಗೆ ಆಕ್ರೋಶ

Lingaraj Badiger
Updated On : 29 Nov 2013, 10:39 am

ಮೂಡಿಗೆರೆ: ಎಲ್ಲೆಲ್ಲೂ ಆಶುಚಿತ್ವ, ಜನಪ್ರತಿನಿಧಿಗಳ ಗಮನಕ್ಕೆ ಬಾರದೇ ಕಟ್ಟಡ ಉದ್ಘಾಟನೆ, ಕುಡಿಯುವ ನೀರಿಗೆ ಹಾಹಾಕಾರ, ಅಧಿಕಾರಿಗಳ ಉಡಾಫೆ ಉತ್ತರ...
-ಇದು ಜಿಪಂ, ತಾಪಂ ಸದಸ್ಯರಿಗೆ ಮೂಡಿಗೆರೆ ಕೆಎಸ್ಸಾರ್ಟಿಸಿ ಘಟಕದಲ್ಲಿ ಆದ ಅನುಭವ.
ಜಿಪಂ ಸದಸ್ಯ ಎಂ.ಎಸ್. ಅನಂತು, ತಾಪಂ ಸದಸ್ಯರಾದ ಎ.ಜೆ. ಸುಬ್ರಾಯ ಮತ್ತು ಸಬ್ಲೀ ದೇವರಾಜ್ ಅವರು ಮುಡಿಗೆರೆ ಕೆಎಸ್ಸಾರ್ಟಿಸಿ ಘಟಕಕ್ಕೆ ಭೇಟಿ ನೀಡಿದಾಗ ಅಲ್ಲಿನ ಅವ್ಯವಸ್ಥೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೆ, ವ್ಯವಸ್ಥಾಪಕರು ಗೈರು ಹಾಜರಿಯಾಗಿದ್ದು ಕಂಡು ಬಂತು. ಸರಿಯಾದ ಮಾಹಿತಿ ದೊರೆಯದ ಕಾರಣ ದೂರವಾಣಿ ಮೂಲಕ ಜಿಲ್ಲಾ ಘಟಕದ ಅಧಿಕಾರಿಗಳನ್ನು ಮಾಹಿತಿ ಕೇಳಿದಾಗ ಉಡಾಫೆಯ ಉತ್ತರ ನೀಡುವುದರೊಂದಿಗೆ ಯಾವುದೇ ಮಾಹಿತಿ ಕೊಡಲಾಗುವುದಿಲ್ಲ ಎಂದು ತಿಳಿಸಿದರು.
ಬಳಿಕ ಮಾತನಾಡಿದ ಜಿಪಂ ಸದಸ್ಯ ಎಂ.ಎಸ್. ಅನಂತು, ಜನಪ್ರತಿನಿಧಿಗಳೊಂದಿಗೆ ಅಧಿಕಾರಿಗಳು ಸೌಜನ್ಯದಿಂದ ವರ್ತಿಸುತ್ತಿಲ್ಲ. ಮೂಡಿಗೆರೆ ಘಟಕದಲ್ಲಿ ಅಧಿಕಾರಿಗಳ ದೌರ್ಜನ್ಯದಿಂದ ಚಾಲಕರು ಮತ್ತು ನಿರ್ವಾಹಕರು ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂದರು.
ಇತ್ತೀಚೆಗೆ ಸಿಬ್ಬಂದಿಯೊಬ್ಬ ಅಧಿಕಾರಿಗಳ ದೌರ್ಜನ್ಯಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದ. ಆದರೂ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಲು ಮೇಲಧಿಕಾರಿಗಳು ಮೀನಮೇಷ ಎಣಿಸುತ್ತಿದ್ದಾರೆ ಎಂದು ಟೀಕಿಸಿದರು.
--
ಡಿ.1ರಂದು ಕಾರ್ತಿಕ ದೀಪೋತ್ಸವ
ಚಿಕ್ಕಮಗಳೂರು: ನಗರದ ಹಟ್ಟಿ ಮಾರಮ್ಮನವರ ದೇವಾಲಯದಲ್ಲಿ ಡಿ.1 ರಂದು ರಾತ್ರಿ 8 ಗಂಟೆಗೆ ಕಾರ್ತಿಕ ದೀಪೋತ್ಸವ ನಡೆಯಲಿದೆ.
ಅಂದು ಅಮ್ಮನವರಿಗೆ ಬೆಳ್ಳಿಯ ಕವಚ ಧರಿಸುವುದು, ನೂತನ ಬೆಳ್ಳೆಯ ಪ್ರಭಾವಳಿ ಸಮರ್ಪಣೆ, ಕಪ್ಪು ಬಟ್ಟೆ ಸುಡುವುದು, ದೇವಸ್ಥಾನದ ಸುತ್ತ ಮಣ್ಣಿನ ಹಣತೆ ಹಚ್ಚುವುದು ಹಾಗೂ ನೂತನ ಬೆಳ್ಳಿಯ ಪ್ರಭಾವಳಿ ಸೇವಾಕರ್ತರಿಗೆ ಸನ್ಮಾನ ಹಮ್ಮಿಕೊಳ್ಳಲಾಗಿದೆ ಎಂದು ದೇವಸ್ಥಾನ ಟ್ರಸ್ಟ್‌ನ ಮುಖ್ಯಸ್ಥರಾದ ಜಗದೀಶ್ ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement