ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಬಾಳೆಗೆ ರೋಗ: ಸೂಕ್ತ ಕ್ರಮ ಕೈಗೊಳ್ಳಲು ಸೂಚನೆ

Lingaraj Badiger
Updated On : 29 Nov 2013, 10:33 am

ಮೂಡಿಗೆರೆ: ಚಿಕ್ಕಮಗಳೂರು ಜಿಲ್ಲಾದ್ಯಾಂತ ಬಾಳೆ ಒಂದು ಲಾಭದಾಯಕ ಬೆಳೆಯಾಗಿ ರೈತರು ವಿವಿಧ ಬಾಳೆ ತಳಿಗಳನ್ನು ಏಕಬೆಳೆಯಾಗಿ ಗದ್ದೆಗಳಲ್ಲಿ ಮತ್ತು ಮಿಶ್ರ ಬೆಳೆಯಾಗಿ ಅಡಕೆ, ತೆಂಗು, ಕಾಫಿಯೊಂದಿಗೆ ಬೆಳೆಯಲಾಗುತ್ತದೆ. ಬಾಳೆಯಲಿ ಹೆಚ್ಚಾಗಿ ಎಲೆ ಚುಕ್ಕೆ ರೋಗವು ಸಾಮಾನ್ಯವಾಗಿ ಎಲೆಗಳ ಮೇಲೆ ಹಳದಿ ಮಿಶ್ರಿತ ಕಂದು ಬಣ್ಣದ ಚುಕ್ಕೆಗಳೋಪಾದಿಯಲ್ಲಿ ಕಾಣಿಸಿಕೊಂಡಿದೆ.
 ಇದರಿಂದ ತುದಿ ಮತ್ತು ಅಂಚಿನಿಂದ ಒಣಗುವುದಕ್ಕೆ ಪ್ರಾರಂಭಿಸಿ ಪೂರ್ತಿ ಎಲೆ ಒಣಗುತ್ತದೆ. ಇಂತಹ ರೋಗದ ಲಕ್ಷಣ ಕಂಡು ಬಂದ ತಕ್ಷಣ ರೋಗದ ಎಲೆಗಳನ್ನು ಕತ್ತರಿಸಿ ತೆಗೆಯಬೇಕು ಮತ್ತು ರೋಗ ಹೆಚ್ಚಾಗಿದ್ದಲ್ಲಿ 10 ಗ್ರಾಂ ಕಾರ್ಬನ್‌ಡೈಜಿಮ್ ಅಥವಾ 10 ಎಂಎಲ್ ಪ್ರೋಪಿಯೋಕೋನಜಲ್ 10 ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಕೃಷಿ ಇಲಾಖೆ ಅಥವಾ ಕೃಷಿ ವಿಜ್ಞಾನ ಕೇಂದ್ರ, ಮೂಡಿಗೆರೆಯನ್ನು ಸಂಪರ್ಕಿಸಬೇಕೆಂದು ಕೃಷಿ ವಿಜ್ಞಾನ ಕೇಂದ್ರದ ವಿಷಯ ತಜ್ಞರಾದ ಡಾ. ಗಿರೀಶ್ ಆರ್. ಸೂಚಿಸಿದ್ದಾರೆ.

ಡಿ.2 ದೀಪೋತ್ಸವ
ನರಸಿಂಹರಾಜಪುರ: ಪಟ್ಟಣದ ಹಳೇ ಮಂಡಗದ್ದೆ ರಸ್ತೆಯಲ್ಲಿರುವ ಕಾಳಿಕಾಂಬ ದೇವಸ್ಥಾನದಲ್ಲಿ ಡಿಸೆಂಬರ್ 2 ರಂದು ಸಂಜೆ 7 ರಿಂದ ರಾತ್ರಿ 8.30 ಗಂಟೆಯವರೆಗೆ ದೀಪೋತ್ಸವ ಪೂಜೆ ನಡೆಯಲಿದೆ ಎಂದು ಕಾಳಿಕಾಂಬ ದೇವಸ್ಥಾನದ ಸಮಿತಿ ಅಧ್ಯಕ್ಷ ಪಿ.ಬಿ. ಮಂಜುನಾಥ ಆಚಾರ್ಯ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement