ಬೈಕ್ ಅಪಘಾತ: ಮಹಿಳೆ ಸಾವು
ಕೊಪ್ಪ: ತಾಲೂಕಿನ ಕಲ್ಕೇರೆ ಬಳಿಯಲ್ಲಿ ಬೈಕ್ ಅಪಘಾತ ಸಂಭವಿಸಿ ಬೈಕ್ ಹಿಂದಿನ ಸೀಟಿನಲ್ಲಿ ಕುತಿಳಿದ್ದ ಮಹಿಳೆ ತಲೆಗೆ ಪೆಟ್ಟು ಬಿದ್ದು ರಕ್ತಸ್ರಾವವಾಗಿ ಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟ ಘಟನೆ ನವೆಂಬರ್ 27ರ ರಾತ್ರಿ ಸಂಭವಿಸಿದೆ.
ಬಿಳಾಲು ಕೊಪ್ಪದ ಮೂಲದ ರಮೇಶ್ ಮತ್ತು ಶಶಿಕಲಾ ದಂಪತಿಗಳು ಕೊಪ್ಪದಿಂದ ಬಿಳಾಲು ಕೊಪ್ಪಕ್ಕೆ ಸ್ಕೂಟಿಯಲ್ಲಿ ತೆರಳುತಿದ್ದ ಸಂದರ್ಭದಲ್ಲಿ ಕಲ್ಕೇರೆ ಬಳಿ ರಸ್ತೆಯ ಪಕ್ಕದಿಂದ ಬಸ್‌ನ್ನು ಹತ್ತುಲು ಓಡಿಬಂದ ಪ್ರಯಾಣಿಕ ಸ್ಕೂಟಿಯ ಮೇಲೆ ಬಿದ್ದ ಪರಿಣಾಮ ಸ್ಕೂಟಿ ಬಿದ್ದದರಿಂದ ಹಿಂಭಾಗದಲ್ಲಿ ಕುಳಿತಿದ್ದ ಶಶಿಕಲಾ(55) ಅವರ ತಲೆ ರಸ್ತೆಗೆ ಅಪ್ಪಳಿಸಿ ತಲೆಗೆ ತೀವ್ರ ಪೆಟ್ಟು ಬಿದ್ದಿತ್ತು.
ನಂತರ ಅವರನ್ನು ಮಣಿಪಾಲದ ಆಸ್ಪತ್ರೆಗೆ ಸೇರಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.