ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಮಾತೃಭಾಷೆಯಿಂದ ಭಾವನೆ ಸಮರ್ಥ ಬಳಕೆ

Lingaraj Badiger
Updated On : 29 Nov 2013, 10:34 am

ಕ.ಪ್ರ.  ವಾರ್ತೆ  ತರೀಕೆರೆ  ನ.28
ಮಾತೃಭಾಷೆಯಿಂದ ಮಾತ್ರವೇ ಭಾವನೆಗಳನ್ನು ಸಮರ್ಥವಾಗಿ ಬಳಸಬಹುದು ಎಂದು ಲಿಂಗದಹಳ್ಳಿ ಸ.ಪ.ಪೂ. ಕಾಲೇಜು ಉಪನ್ಯಾಸಕ ಕಿರಣ್ ತಿಳಿಸಿದರು.
ಗುರುವಾರ ತಾಲೂಕು ಕಸಾಪ ವತಿಯಿಂದ ಸಮೀಪದ ಲಿಂಗದಹಳ್ಳಿ ಸ.ಪ.ಪೂ. ಕಾಲೇಜು ಸಭಾಂಗಣದಲ್ಲಿ ನಡೆದ ದತ್ತಿ ಉಪನ್ಯಾಸ ಮತ್ತು ಹೋಬಳಿ ಅಧ್ಯಕ್ಷರ ಸೇವಾ ದೀಕ್ಷೆ ಸಮಾರಂಭದಲ್ಲಿ ಮಾಜಿ ಶಾಸಕ ದತ್ತಿ ದಾನಿ ಬಿ.ಆರ್.ನೀಲಕಂಠಪ್ಪ ಅವರ ಹೆಸರಿನ ದತ್ತಿ ಉಪನ್ಯಾಸ ನೀಡಿದರು.
ಭ್ರಮೆ ಬೇಡ: ಮಗುವಿನ ಲಾಲನೆ- ಪಾಲನೆ, ನಡೆ- ನುಡಿ, ಪರಿಸರದಲ್ಲಿ ಬಳಸುವುದೇ ಮಾತೃಭಾಷೆ. ಅದರ ಸಾಮರ್ಥ್ಯ ಬಹಳ ದೊಡ್ಡದು. ಅದರಿಂದ ಜ್ಞಾನಾರ್ಜನೆ ಸಾಧ್ಯ ಎಂದರು.
 ದತ್ತಿ ದಾನಿಗಳಾದ ತಾಲೂಕು ಕಸಾಪ ನಿಕಟಪೂರ್ವ ಅಧ್ಯಕ್ಷ ಟಿ.ಸಿ.ಕೆಂಚಪ್ಪ ಮತ್ತು ಡಾ. ಟಿ.ಸಿ. ರಾಮಚಂದ್ರಪ್ಪ ಅವರ ಹೆಸರಿನ ದತ್ತಿ ಉಪನ್ಯಾಸದಲ್ಲಿ ಯುವ ಲೇಖಕ ತ.ಮ. ದೇವಾನಂದ ಅವರು ಕನಕದಾಸರ ಕೃತಿಗಳಲ್ಲಿ ಸಾಮಾಜಿಕ ಪ್ರಜ್ಞೆ ಕುರಿತು ಮಾತನಾಡಿ, ಕನಕದಾಸರು ವಿಶ್ವಮಾನವತಾವಾದಿಗಳು, ಕನಕರು ಸಮಾಜಕ್ಕೆ ತಮ್ಮದೆ ಆದ ಕೊಡುಗೆ ನೀಡಿದರು ಎಂದು ತಿಳಿಸಿದರು.
ಗಾಯಕ, ಕನ್ನಡಶ್ರೀ ಬಿ.ಎಸ್. ಭಗವಾನ್ ಕನ್ನಡ ಗೀತೆಗಳನ್ನು ಹಾಡಿ ವ್ಯಾಖ್ಯಾನ ಮಾಡಿ ಮಾತನಾಡಿ, ಕಸಾಪ ಸ್ಥಾಪನೆಯಾಗಿ ನೂರು ವರ್ಷ ತುಂಬಿದ್ದು, ಮುಂದಿನ ವರ್ಷ ಶತಮಾನೋತ್ಸವ ಅಚರಿಸಲಾಗುತ್ತಿದೆ. ದತ್ತಿ ಉಪನ್ಯಾಸ ಒಂದು ವಿಶೇಷ ಕಾರ್ಯಕ್ರಮ. ಭಾಷೆ ಬೆಳೆಸಿ ಮತ್ತು ಸಂಸ್ಕೃತಿ ಉಳಿಸಿ ಎಂದರು.
ಸ.ಪ.ಪೂರ್ವ ಕಾಲೇಜು ಪ್ರಾಚಾರ್ಯರಾದ ಡಾ. ದಯಾವತಿ ಅವರು ಉದ್ಘಾಟನೆ ನೆರವೇರಿಸಿ ಮಾತನಾಡಿದರು. ತಾಲೂಕು ಕಸಾಪ ಅಧ್ಯಕ್ಷ ಜಿ. ಸುಬ್ರಹ್ಮಣ್ಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹೋಬಳಿ ಕಸಾಪ ಅಧ್ಯಕ್ಷ ಎನ್. ವೆಂಕಟೇಶ್, ಉಪನ್ಯಾಸಕ ಜಯ್ಯಪ್ಪ, ಲಿಂಗದಹಳ್ಳಿ ಹೋಬಳಿ ಕಸಾಪ ನೂತನ ಅಧ್ಯಕ್ಷ ಅನಂತರಾಂ, ಕಾಂಗ್ರೆಸ್ ಮುಖಂಡ ಎಲ್.ಎಂ. ಜಯರಾಂ, ಮನೋಜ್‌ಕುಮಾರ್, ವೆಂಕಟೇಶ್ ಮತ್ತಿತರರು ಮಾತನಾಡಿದರು. ನವೀನ್‌ಕುಮಾರ್,  ಟಿ. ಶ್ರೀನಿವಾಸ್, ಮಧು ಉಪನ್ಯಾಸಕರು, ವಿದ್ಯಾರ್ಥಿಗಳು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement