ಬೆಳೆಗಾರರ ಒಕ್ಕೂಟದ ಅಧ್ಯಕ್ಷರಾಗಿ ಜಯರಾಮ್ ಆಯ್ಕೆ
ಕ.ಪ್ರ.ವಾರ್ತೆ, ಮೂಡಿಗೆರೆ, ನ.30 2013-14 ನೇ ಸಾಲಿನ ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷರಾಗಿ ಮೂಡಿಗೆರೆ ಬೆಳೆಗಾರರ ಸಂಘದ ಮಾಜಿ ಅಧ್ಯಕ್ಷ ಬಿ.ಎಸ್. ಜಯರಾಮ್ ಆಯ್ಕೆಯಾಗಿದ್ದಾರೆ ಎಂದು ಬೆಳೆಗಾರರ ಸಂಘದ ಅಧ್ಯಕ್ಷ ಬಿ. ಬಸವಜ್ ತಿಳಿಸಿದರು.
ಪಟ್ಟಣದ ಬೆಳೆಗಾರರ ಸಂಘದ ಕಚೇರಿಯಲ್ಲಿ ನೂತನ ಅಧ್ಯಕ್ಷ ಬಿ.ಎಸ್. ಜಯರಾಮ್ ಅವರಿಗೆ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು. ಬೆಳೆಗಾರರ ಮತ್ತು ರೈತರ ಪರವಾಗಿ ಬಿ.ಎಸ್. ಜಯರಾಮ ಬಹಳ ಹಿಂದಿನಿಂದಲೂ ಹೋರಾಡಿಕೊಂಡು ಬಂದಿದ್ದಾರೆ ಎಂದರು.
ಉಪಾಧ್ಯಕ್ಷರಾಗಿ ಚಿಕ್ಕಮಗಳೂರು ಜಿಲ್ಲೆಯಿಂದ ರತೀಶ್ ಕುಮಾರ್, ಹಾಸನ ಜಿಲ್ಲೆಯಿಂದ ಎಚ್.ಟಿ. ಮೋಹನ್ ಕುಮಾರ್, ಕೊಡಗು ಜಿಲ್ಲೆಯಿಂದ ನಂದಾ ಬೆಳ್ಳಿಯಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಯು.ಎಂ. ತೀರ್ಥಮಲ್ಲೇಶ್, ಸಂಘಟನಾ ಕಾರ್ಯದರ್ಶಿಗಳಾಗಿ ಚಿಕ್ಕಮಗಳೂರಿನ ಡಿ.ಎಂ. ವಿಜಯ, ಹಾಸನದ ಎನ್.ಬಿ. ಉದಯಕುಮಾರ್, ಕೊಡಗಿನ ಮಹೇಂದ್ರ, ಖಜಾಂಚಿಯಾಗಿ ಮುಜಾಹಿದ್ ಆಲಂ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು.
ಕೋಮಾರ್ಕ್ ಮಾಜಿ ಅಧ್ಯಕ್ಷ ಡಿ.ಬಿ. ಸುಬ್ಬೇಗೌಡರು ಬಿ.ಎಸ್. ಜಯರಾಮ್ ಅವರನ್ನು ಸನ್ಮಾನಿಸಿದರು. ಕೋಮಾರ್ಕ್ ಉಪಾಧ್ಯಕ್ಷ ತೇಜಪಾಲ್, ಗೋಪಾಲಗೌಡ, ರವಿ, ಪಟ್ಟದೂರಿನ ಪಿ.ಕೆ. ನಾಗೇಶ್, ಪ್ರಕಾಶ್, ಯುಎಸ್ಎ ಯ ಕುಮಾರಸ್ವಾಮಿ, ಬೆಳೆಗಾರ ಸಂಘದ ರೇವಣ್ಣ ಸೇರಿದಂತೆ ಹಲವು ಉಪಸ್ಥಿತರಿದ್ದರು.