ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಮಹಿಳಾ ಪರವಾದ ಕಾನೂನು ಅಗತ್ಯ

Vishwanath S
Updated On : 1 Dec 2013, 12:57 pm

ಕಡೂರು: ಮಹಿಳೆಯರ ಮೇಲೆ ನಿತ್ಯ ನಡೆಯುತ್ತಿರುವ ದೌರ್ಜನ್ಯ ಹಾಗೂ ಬಾಲ್ಯವಿವಾಹದ ವಿರುದ್ಧ ಹೋರಾಟ ನಡೆಸಿ, ಮಹಿಳೆಯರ ಪರವಾಗಿ ಬಲವಾದ ಕಾನೂನು ಜಾರಿಗೆ ತರುವಂತೆ ತರೀಕೆರೆ ವಿಕಸನ ಸಂಸ್ಥೆಮತ್ತು ಮಹಿಳಾ ಸದಸ್ಯರ ಒಕ್ಕೂಟ ಸುಗ್ರಾಮದಿಂದ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ವಿಕಸನ ಸಂಸ್ಥೆ ಅಧ್ಯಕ್ಷ ಎ.ಎಮ್. ಕ್ಲೀಟಸ್ ವರ್ಗೀಸ್ ಹೇಳಿದರು. ಅವರು ಕಡೂರು ಪಟ್ಟಣದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಹಿಂಸಾ ನಿರ್ಮೂಲನಾ ದಿನದ ಅಂಗವಾಗಿ ಜನ ಜಾಗೃತಿ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದರು.
ನಿರಂತರ ದೌರ್ಜನ್ಯ: ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸುವ ಚಿಕ್ಕಮಗಳೂರು, ಶಿವಮೊಗ್ಗ, ಹಾಸನ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಕಲಾ ತಂಡಗಳೊಂದಿಗೆ ಬೀದಿನಾಟಕ ಮತ್ತು ಜಾಥಾ ನಡೆಸುವ ಮೂಲಕ ಜನರಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ಕುರಿತು ಅರಿವು ಮೂಡಿಸಲಾಗುತ್ತಿದೆ. ಶೇ 70 ಮಹಿಳೆಯರು ವಿವಿಧ  ಕಿರುಕುಳಕ್ಕೆ ಒಳಗಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಉತ್ತಮ ಸಂಬಂಧ ಕಡಿದು ಹೋಗುತ್ತಿರುವ ಇಂದಿನ ದಿನಗಳಲ್ಲಿ ಗಂಟೆಗೆ 6 ರಿಂದ 7 ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಯತ್ತಿವೆ. ಈ ನಿಟ್ಟಿನಲ್ಲಿ ಹೆಣ್ಣು ಮಕ್ಕಳು ಮಲೆನಾಡಿಗೆ ಕೆಲಸಕ್ಕೆ ಹೋದವರು ದಿಢೀರೆಂದು ನಾಪತ್ತೆಯಾಗುತ್ತಿರುವ ಪ್ರಕರಣ, ಭ್ರೂಣ ಹತ್ಯೆ, ಹೆಣ್ಣು ಮಕ್ಕಳ ಮಾರಾಟ ನಡೆಯುತ್ತಲೇ ಇದೆ. ಈ ರೀತಿ ಹಿಂಸೆಗಳು ಮುಂದುರಿಯುತ್ತಲೇ ಇದ್ದರೆ ಮಹಿಳಾ ಸಂತತಿ ನಾಶವಾಗುತ್ತದೆ ಎಂದು ಎಚ್ಚರಿಸಿದರು. ಕಾರ್ಯಕ್ರಮದಲ್ಲಿ ಸುಗ್ರಾಮ ಒಕ್ಕೂಟದ ಅಧ್ಯಕ್ಷೆ ಸುನಿತಾ, ಯೋಜನೆ ಸಂಯೋಜಕರಾದ ಮುಕುಂದ್,ಶ್ರೀನಿವಾಸ್, ಗ್ರಾಪಂ ಮಹಿಳಾ ಸದಸ್ಯರಾದ ಮಂಜುಳಮ್ಮ, ಮೀನಾಕ್ಷಮ್ಮ, ಗಂಗಮ್ಮ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement