ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಶೀಘ್ರದಲ್ಲಿ ಪದ್ಮಾಗೆ ಅಧ್ಯಕ್ಷ ಸ್ಥಾನ: ಪ್ರಾಣೇಶ್

Vishwanath S
Updated On : 1 Dec 2013, 12:57 pm

ಕಡೂರು:  ಬಯಲು ಪ್ರದೇಶವಾದ ಕಡೂರು ತಾಲೂಕಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಡಿಸೆಂಬರ್ ಅಥವಾ ಜನವರಿ ಮೊದಲ ವಾರದಲ್ಲಿ ಹಿರೇನಲ್ಲೂರು ಜಿಪಂ ಸದಸ್ಯೆ ಪದ್ಮಾ ಚಂದ್ರಪ್ಪನವರು ನೂತನ ಅಧ್ಯಕ್ಷರಾಗಲಿದ್ದು, ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಅರಣ್ಯ ಮತ್ತು ವಸತಿ ನಿಗಮದ ಮಾಜಿ ಅಧ್ಯಕ್ಷ ಎಂ.ಕೆ. ಪ್ರಾಣೇಶ್ ತಿಳಿಸಿದರು.
ಕಡೂರು ಪಟ್ಟಣದಲ್ಲಿ ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಾಣೇಶ್, ತತ್ವ ಆದರ್ಶ  ನಂಬಿಕೊಂಡಿರುವ ಬಿಜೆಪಿಯಲ್ಲಿ ಶಿಸ್ತಿಗೆ ಮೊದಲ ಪ್ರಾಮುಖ್ಯತೆ ನೀಡುವುದರಲ್ಲಿ ಎರಡು ಮಾತಿಲ್ಲ. ಹಿರೇನಲ್ಲೂರು ಜಿಪ ಸದಸ್ಯರಾದ ಪದ್ಮಾ ಚಂದ್ರಪ್ಪನವರಿಗೆ ರೇಖಾ ಹುಲಿಯಪ್ಪಗೌಡರ ನಂತರ ಮುಂದಿನ ಅಧ್ಯಕ್ಷರಾಗಿ ಆಯ್ಕೆ ಮಾಡಬೇಕೆಂದು ಕೋರ್ ಕಮಿಟಿ ಸಭೆಯಲ್ಲಿ ಪಕ್ಷದ ಹಿರಿಯರು ಹಾಗೂ ನಾಯಕರ ಸಮುಖದಲ್ಲಿ ತೀರ್ಮಾನವಾಗಿದ್ದು ನಿಜ ಎಂದರು. ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿ ಇರದ ಕಾರಣ ಜಿಪಂನಲ್ಲಿ ಬೇರೆ ಪಕ್ಷಗಳಿಂದ ಟೀಕೆ ಎದುರಿಸುವುದು ಬೇಡ ಎಂಬ ಹಿನ್ನೆಲೆಯಲ್ಲಿ ಮತ್ತು ಈಗಾಗಲೇ ಜಿಪಂನಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದ ವಿವಿಧ ಅಭಿವೃದ್ಧಿ ಕಾಮಗಾರಿ ಮತ್ತು ಟೆಂಡರ್ ಮುಂದುವರಿಸಲು ಎರಡನೇ ಬಾರಿ ಅಧ್ಯಕ್ಷರಾಗಿ ಅನುಭವ ಹೊಂದಿದ್ದ  ರೇಖಾರವರನ್ನು ಅನಿವಾರ್ಯವಾಗಿ ಕೆಲವೇ ದಿನಗಳು ಮಾತ್ರ ಅವರಿಗೆ ಮುಂದುವರಿಯಲು ಕೋರ್ ಕಮಿಟಿ ಅನುಮತಿ ನೀಡಿತ್ತು ಎಂದರು.
ತಾಲೂಕು ಬಿಜೆಪಿ ಅಧ್ಯಕ್ಷ ಕೆ. ಹೆಚ್. ಶಂಕರ್, ನಗರಘಟಕದ ಅಧ್ಯಕ್ಷ ಎ.ಮಣಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement