ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಸಕ್ಕರೆ ಲಾಬಿಗೆ ಮಣಿಯದಿರಿ: ಬಿಜೆಪಿ

Vishwanath S
Updated On : 1 Dec 2013, 12:57 pm

ತರೀಕೆರೆ: ಸಕ್ಕರೆ ಕಾರ್ಖಾನೆ ಮಾಲಿಕರ ಲಾಬಿಗೆ  ಮಣಿಯಬಾರದು ಎಂದು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಆರ್.ದೇವಾನಂದ್ ಸರ್ಕಾರವನ್ನು ಒತ್ತಾಯಿಸಿದ್ದಾರೆ
 ಬೆಳಗಾಂ ಅಧಿವೇಶನದ ಸಮಯದಲ್ಲಿ ಕಬ್ಬು ಬೆಳೆಗಾರರು ಪ್ರತಿಭಟನೆಯ ಸಂದರ್ಭದಲ್ಲಿ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡು ಕಬ್ಬು ಬೆಳೆಗಾರರ ಶೋಚನೀಯ ಆರ್ಥಿಕ ಪರಿಸ್ಥಿತಿಯ ಮೇಲೆ ಬೆಳಕುಚೆಲ್ಲುವಂತಾಗಿದೆ.
   ರೈತರು ಬೆಳೆದ ಕಬ್ಬಿಗೆ ಈವರೆವಿಗೂ ನ್ಯಾಯವಾದ ವೈಜ್ಞಾನಿಕ ಬೆಲೆ ದೊರೆತಿಲ್ಲ ಎಂಬುದು ಕಟು ಸತ್ಯ ಎಂದು ಅವರು ತಿಳಿಸಿದ್ದಾರೆ.
ಅವೈಜ್ಞಾನಿಕ ಬೆಲೆ: ದೇಶದಲ್ಲಿ ಹರಿಯಾಣ ರಾಜ್ಯದಲ್ಲಿ ಮಾತ್ರ ಪ್ರತಿ ಟನ್ ಕಬ್ಬಿಗೆ 3000 ರು. ಸಿಗುತ್ತಿದೆ, ಕರ್ನಾಟಕ ರಾಜ್ಯದಲ್ಲಿ ಇದೀಗ 2650 ರು. ಬೆಲೆ ನಿಗಧಿಯಾಗಿದ್ದು ಈ ಬೆಲೆಯೂ ಸಹ ವೈಜ್ಞಾನಿಕವಾಗಿಲ್ಲ, ರಾಜ್ಯದಲ್ಲಿ ಸಕ್ಕರೆ ಲಾಬಿ ಕೆಲಸ ಮಾಡುತ್ತಿದ್ದು, ಕಾರ್ಖಾನೆ ಮಾಲಿಕರು ಕಬ್ಬು ಬೆಳೆಗಾರರನ್ನು ಶೋಷಣೆ ಮಾಡುತ್ತಿದ್ದಾರೆ ಎಂದು ಅಳರು ಆರೋಪಿಸಿದ್ದಾರೆ.
 ಪ್ರಭಾವಿ ರಾಜಕಾರಿಣಿಗಳ ನಿಯಂತ್ರಣದಲ್ಲಿ ಸಕ್ಕರೆ ಕಾರ್ಖಾನೆ ಇರುವುದರಿಂದ ಕಬ್ಬು ಬೆಳೆಗೆ ವೈಜ್ಞಾನಿಕ ಬೆಲೆ ನಿಗಧಿಯಾಗಿಲ್ಲ,  ರೈತರಿಗೆ ಕೊಡಬೇಕಾಗಿರುವ ಪೂರ್ಣ ಬಾಕಿಯನ್ನು ಸಹ ಮಾಲಿಕರು ಪಾವತಿಸಿಲ್ಲ. ಸರ್ಕಾರ ನಿಗಧಿ ಮಾಡಿರುವ ಬೆಲೆಯನ್ನು ಸಹ ಕೊಡಲು ಕಾರ್ಖಾನೆ ಮಾಲಿಕರು ಒಪ್ಪತ್ತಿಲ್ಲ ಎಂದು ಅವರು ತಿಳಿಸಿದ್ದಾರೆ.
ಬಾಕಿ ಹಣ ಪಾವತಿಸಿ: ಮಾಲಿಕರು ರಂಗ ರಾಜನ್ ವರದಿಯನ್ನು ಆಧಾರವಾಗಿಟ್ಟುಕೊಂಡು ಮಾತನಾಡುತ್ತಿದ್ದಾರೆ. ಈ ವರದಿಯೂ ಸಹ ರೈತರಿಗೆ ಲಾಭದಾಯಕವಲ್ಲ. ಆದುದರಿಂದ ಸರ್ಕಾರ ಸಕ್ಕರೆ ಲಾಬಿಗೆ ಮಣಿಯದೆ ರೈತರ ಪರ ನಿಂತು ರೈತರ ಬಾಕಿಯನ್ನು ತಕ್ಷಣ ಕೊಡಿಸಬೇಕು. ರೈತರಿಂದ ಮುಚ್ಚಳಿಕೆ ಪತ್ರವನ್ನು ಬರೆಸಿಕೊಳ್ಳಕೂಡದೆಂದು ಅವರು ಆಗ್ರಹಿಸಿದ್ದಾರೆ.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement