ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಜನ ಬದಲಾವಣೆ ಬಯಸಿದ್ದಾರೆ: ಅನಂತ್

Vishwanath S
Updated On : 2 Apr 2014, 11:39 am

ಕ.ಪ್ರ.ವಾರ್ತೆ , ಶೃಂಗೇರಿ , ಏ. 1
ಕೇಂದ್ರದಲ್ಲಿನ ಹತ್ತು ವರ್ಷಗಳ ಯುಪಿಎ ಸರ್ಕಾರದ ಜನ ವಿರೋಧಿ ನೀತಿ, ಬೆಲೆ ಏರಿಕೆ, ಭ್ರಷ್ಟಾಚಾರ, ಹಗರಣಗಳು, ಸ್ವಜನ ಪಕ್ಷಪಾತತೆಗಳಿಂದ ಬೇಸತ್ತು ಜನರು ಈ ಭಾರಿ ಬದಲಾವಣೆ ಬಯಸಿದ್ದಾರೆ. ಆದ್ದರಿಂದ ಈಗ ಪರಿವರ್ತನೆಯ ಕಾಲ ಬಂದೊದಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತ್ ಕುಮಾರ್ ತಿಳಿಸಿದ್ದಾರೆ.
ಪಟ್ಟಣದ ಗೌರೀಶಂಕರ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಬಿಜೆಪಿ ಚುನಾವಣಾ ಪ್ರಚಾರ ಭಾಷಣ ಮಾಡಿ,           
ಸೋನಿಯ ಗಾಂಧಿ, ಮನಮೋಹನ್ ಸಿಂಗ್ ಅವರ ಕೆಟ್ಟ ಆಡಳಿತ, ಕೇಜ್ರಿವಾಲ್ ರಾಜಕೀಯ ವಿದ್ಯಮಾನಗಳಿಂದ ಜನರು ಬೇಸತ್ತಿದ್ದಾರೆ.ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರು ನೆಮ್ಮದಿ ಕಳೆದುಕೊಂಡಿದ್ದಾರೆ. ಕಾಂಗ್ರೆಸ್ ಮೋದಿಯವರ ಬಗ್ಗೆ ಟೀಕೆ, ಹೀಯಾಳಿಸುವುದೇ ಅವರ ಚುನಾವಣಾ ಪ್ರಚಾರ ತಂತ್ರವಾಗಿದೆ.
ಅಡಕೆ ಹಾನಿಕಾರಕವೆಂದು ನಿಷೇಧಿಸಲು ಸುಪ್ರಿಂ ಕೋರ್ಟಿಗೆ ಪ್ರಮಾಣ ಪತ್ರ ನೀಡಿದ್ದಾರೆ. ಅರಣ್ಯ ಕಾಯ್ದೆಗೆ ತಿದ್ದುಪಡಿಯಾಗಬೇಕು ಎಂದರು.
ಗಡಿ ಸುರಕ್ಷಿತವಾಗಿಲ್ಲ: ದೇಶದ ಗಡಿಗಳು ಸುರಕ್ಷಿತವಾಗಿಲ್ಲ. ಮೂರುವರೆ ಕೋಟಿ ಬಾಂಗ್ಲಾ ವಲಸೆಗಾರರು ದೇಶದೊಳಗೆ ನುಸುಳಿದ್ದಾರೆ. ಚೀನ ಈಗಾಗಲೇ ದೇಶದೊಳಗೆ 13 ಕಿ.ಮಿ.ಅತಿಕ್ರಮಣ ಮಾಡಿದೆ. ಪಾಕಿಸ್ತಾನ 410 ಬಾರಿ ಗಡಿ ರೇಖೆ ದಾಟಿದೆ. ಆದರೂ ಕೇಂದ್ರ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಕಾಂಗೆಸ್ ಕಪ್ಪುಹಣವನ್ನು ವಿದೇಶದಲ್ಲಿಟ್ಟಿದೆ. ಕೇಂದ್ರ ಸರ್ಕಾರ ಉತ್ತಮ ಆಡಳಿತ ನೀಡುವಲ್ಲಿ ವಿಫಲವಾಗಿದೆ. ಜನರು ಈ ಭಾರಿ ಮೋದಿಯವರನ್ನು ಬೆಂಬಲಿಸಬೇಕು ಎಂದು ಅವರು ಮನವಿ ಮಾಡಿದರು.
ಉಡುಪಿ ಚಿಕ್ಕಮಗಳೂರು ಲೋಕಸಭಾ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆಯನ್ನು ಗೆಲ್ಲಿಸಬೇಕು. ಬಿಜೆಪಿ ಅಧಿಕಾರಕ್ಕೆ ಬಂದರೆ ಅಗತ್ಯ ವಸ್ತುಗಳ ಬೆಲೆಯನ್ನು ಕಡಿಮೆ ಗೊಳಿಸುತ್ತದೆ. ಅಡಕೆ ಹಾನಿಕರವಲ್ಲ ವೆಂದು ಪ್ರಮಾಣ ಪತ್ರ ಸಲ್ಲಿಸುತ್ತದೆ. ಅರಣ್ಯಕಾಯ್ದೆ ತಿದ್ದುಪಡಿ ಸೇರಿದಂತೆ ಉತ್ತಮ ಜನಪರ ಕೆಲಸ ಮಾಡುತ್ತದೆ ಎಂದರು.
ಹೆಗ್ಡೆ ವಿರುದ್ಧ ಆರೋಪ: ಶಾಸಕ ಡಿ.ಎನ್. ಜೀವರಾಜ್ ಮಾತನಾಡಿ, ಗೌರೀಶಂಕರ ಸಭಾಂಗಣದಲ್ಲಿ ಕಾರ್ಯಕ್ರಮ ನಡೆದಾಗ ಸಭಾಂಗಣ ತುಂಬಿದಾಗಲೆಲ್ಲ ಪಕ್ಷದ ಅಭ್ಯರ್ಥಿಗಳು ಗೆದ್ದಿದ್ದಾರೆ. ಈ ಭಾರಿಯೂ ನಮ್ಮ ಅಭ್ಯರ್ಥಿಗಳು ಗೆಲ್ಲುವುದರಲ್ಲಿ ಸಂಶಯವಿಲ್ಲ. ಈ ಭಾಗದ ಸಂಸದ ಜಯಪ್ರಕಾಶ್ ಹೆಗ್ಡೆ ಯಾವುದೇ ರೀತಿಯ ಉತ್ತಮ ಕೆಲಸ ಮಾಡಿಲ್ಲ. ಅಡಕೆ ಬೆಳೆಗಾರ ಸಮಸ್ಯೆ, ಗೋರಕ್ ಸಿಂಗ್ ವರದಿ ಜಾರಿಗೊಳಿಸಿಲ್ಲ ಎಂದು ಆರೋಪಿಸಿದರು.
ಕೇಂದ್ರದಲ್ಲಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದರೂ ಇಲ್ಲಿಯ ಸಂಸದರು ಜನರ ಸಮಸ್ಯೆ ಬಗೆಹರಿಸುವಲ್ಲಿ ವಿಫಲರಾಗಿದ್ದಾರೆ. ಕೇಂದ್ರ ಸರ್ಕಾರ ತರಾತುರಿಯಲ್ಲಿ ಕಸ್ತೂರಿ ರಂಗನ್ ವರದಿಯನ್ನು ಅನುಷ್ಠಾನಗೊಳಿಸಿದೆ ಎಂದು ಆರೋಪಿಸಿದರು.
ರಾಜ್ಯ ಮಹಿಳಾ ಮೋರ್ಚದ ಅಧ್ಯಕ್ಷೆ ಸುಲೋಚನಾ ಹೆಗ್ಡೆ, ರಾಮಸ್ವಾಮಿ, ಮಹಾಬಲಾ ಹೆಗ್ಡೆ, ಎಂ.ಎಸ್.ರಂಗನಾಥ್,ಬಿ.ಶಿವಶಂಕರ್, ಗೋಪಾಲ್ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement