ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

'ಅಧಿವೇಶನದ ದಾಖಲೆ ಪರಿಶೀಲಿಸಿ ಮಾತನಾಡಿ'

Lingaraj Badiger
Updated On : 3 Apr 2014, 11:10 am

ಬಾಳೆಹೊನ್ನೂರು: ಉಡುಪಿ- ಚಿಕ್ಕಮಗಳೂರು ಸಂಸದರು ಲೋಕಸಭೆಯಲ್ಲಿ ಒಂದೇ ಒಂದು ಪ್ರಶ್ನೆಗಳನ್ನು ಕೇಳಿಲ್ಲ ಎಂದು ವಿರೋಧ ಪಕ್ಷಗಳು ಆರೋಪಿಸುವ ಮೊದಲು ಅಧಿವೇಶನದ ದಾಖಲೆ ಪರಿಶೀಲಿಸಿ ಮಾತನಾಡಲಿ ಎಂದು ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಪ್ರತಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ.
ಇಲ್ಲಿನ ಬಸ್ಸು ನಿಲ್ದಾಣ ಸಮೀಪದ ಹಾಲಪ್ಪಗೌಡ ಕಾಂಪ್ಲೆಕ್ಸ್ ಮುಂಭಾಗದಲ್ಲಿ ಮಂಗಳವಾರ ನಡೆದ ಕಾಂಗ್ರೆಸ್ ಪಕ್ಷದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಲೋಕಸಭೆಯಲ್ಲಿ 12 ನೂತನ ವಿಧೇಯಕ ಮಂಡನೆ ವೇಳೆ ನಡೆದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ್ದೇನೆ. ಸುಮಾರು 67 ಪ್ರಶ್ನೆಗಳನ್ನು ಕೇಳಿದ ಬಗ್ಗೆ ದಾಖಲೆ ಲಭ್ಯವಿದೆ. ಈ ಅಂಶಗಳನ್ನು ವಿರೋಧ ಪಕ್ಷಗಳು ಮೊದಲು ಪರಿಶೀಲಿಸಿ ಮಾತನಾಡುವುದನ್ನು ಕಲಿಯಬೇಕು ಎಂದರು.
ಜಿಪಂ ಮಾಜಿ ಅಧ್ಯಕ್ಷ ಟಿ.ಡಿ. ರಾಜೇಗೌಡ ಮಾತನಾಡಿ, ರಾಜ್ಯ ಹಾಗೂ ಕೇಂದ್ರ ಸರ್ಕಾರದ ಹಲವು ಜನಪರ ಯೋಜನೆ ಗುರುತಿಸಿ ಮತದಾರರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಕಾಲ್ನಡಿಗೆಯಲ್ಲಿ ಮತಯಾಚನೆ: ಸಭೆಗೂ ಮುನ್ನ ಪಟ್ಟಣದ ರೋಟರಿ ವೃತ್ತದಿಂದ ಬಸ್ಸು ನಿಲ್ದಾಣದವರೆಗೆ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಕಾಲ್ನಡಿಗೆಯಲ್ಲಿ ಅಂಗಡಿ ಮುಂಗಟ್ಟುಗಳಿಗೆ ತೆರಳಿ ಮತ ಯಾಚಿಸಿದರು.
ಕಾಂಗ್ರೆಸ್ ಮುಖಂಡ ಬಿ.ಸಿ. ಗೀತಾ, ಸಚಿನ್ ಮೀಗಾ, ಜಿಪಂ ಸದಸ್ಯ ಮಹಮ್ಮದ್ ಇಫ್ತೆಖಾರ್ ಆದಿಲ್, ಹೋಬಳಿ ಯುವ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಶಹಾಬ್, ಬಿ. ಕಣಬೂರು ಗ್ರಾಪಂ ಅಧ್ಯಕ್ಷೆ ಶಾಹೀದಾ ಬಾನು, ಸದಸ್ಯ ಬಿ.ಕೆ. ಮಧುಸೂಧನ್, ಮಹಮ್ಮದ್ ಹನೀಫ್, ಜಂಶೀದ್ ಅಹ್ಮದ್ ಸೇರಿದಂತೆ ಹಲವರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement