ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಧೈರ್ಯವಿದ್ದರೆ 'ಭ್ರಷ್ಟಾಚಾರ ಮುಕ್ತ ಭಾರತ' ಘೋಷಣೆ ಮಾಡಿ

Lingaraj Badiger
Updated On : 3 Apr 2014, 11:10 am

ಚಿಕ್ಕಮಗಳೂರು: ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣಕ್ಕಾಗಿ ಕರೆ ನೀಡಿರುವ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರಿಗೆ ಧೈರ್ಯ ಇದ್ದರೆ, ಹಸಿವು ಮತ್ತು ಭ್ರಷ್ಟಚಾರ ಮುಕ್ತ ಭಾರತ ನೀಡುತ್ತೇವೆಂಬ ಘೋಷಣೆ ಮಾಡಲಿ ಎಂದು ಕೇಂದ್ರದ ಮಾಜಿ ಸಚಿವೆ ಡಿ.ಕೆ. ತಾರಾದೇವಿ ಸವಾಲು ಹಾಕಿದ್ದಾರೆ.
ಭ್ರಷ್ಟಚಾರ ಮುಕ್ತ ದೇಶ ನೀಡುತ್ತೇವೆಂದು ಹೇಳುವ ಧೈರ್ಯ ಅವರಿಗಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಬುಧವಾರ ಅವರು ಟೀಕಿಸಿದರು.
ಭ್ರಷ್ಟಾಚಾರದಲ್ಲಿ ಬಿಜೆಪಿ: ಕಳೆದ 5 ವರ್ಷದಲ್ಲಿ ರಾಜ್ಯದಲ್ಲಿ ಅಧಿಕಾರ ನಡೆಸಿದ್ದ ಬಿಜೆಪಿ ಹಲವು ಭ್ರಷ್ಟಚಾರದಲ್ಲಿ ತೊಡಗಿತ್ತು. ಇದರಿಂದಾಗಿ ಕೆಲವರು ಜೈಲಿಗೆ ಹೋಗಿ ಬಂದರು. ಆಂತರಿಕ ಕಲಹದಿಂದಾಗಿ ರೆಸಾರ್ಟ್ ರಾಜಕಾರಣ ನಡೆಯಿತು.
   ಪ್ರಜಾಪ್ರಭುತ್ವವನ್ನು ಕೊಲ್ಲುವಂತಹ ಕೃತ್ಯಗಳು ಬಿಜೆಪಿಯಿಂದ ನಡೆಯಿತು. ಇಂತಹ ವ್ಯಕ್ತಿ ಮೋದಿಯವರ ಹಿಂದಿದ್ದಾರೆ ಎಂದು ಆರೋಪಿಸಿದರು.
ಬಣ್ಣದ ಮಾತು: ಒಮ್ಮೆ ಬಿಜೆಪಿ ವಾಜಪೇಯಿ ಮುಖವಾಡ ಹಾಕಿಕೊಂಡು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿತ್ತು. ಇದೀಗ ಮೋದಿ ಮುಖವಾಡ ಧರಿಸಿಕೊಂಡು ಅಧಿಕಾರಕ್ಕೆ ಬರಲು ಯತ್ನಿಸುತ್ತಿದೆ. ಅವರ ಬಣ್ಣ ಬಣ್ಣದ ಡೈಲಾಗ್‌ಗಳನ್ನು ನೋಡಿ ಮತ ಹಾಕಬೇಡಿ. ಬಿಜೆಪಿ ಸಿದ್ಧಾಂತ ಇಲ್ಲದ ಪಕ್ಷ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಡಿ.ಎಲ್. ವಿಜಯಕುಮಾರ್, ಪ್ರಚಾರ ಸಮಿತಿ ಅಧ್ಯಕ್ಷ ಎ.ಎನ್. ಮಹೇಶ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement