ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಅಂಗಡಿ ಗ್ರಾಮದಲ್ಲಿ ಕಾಂಗ್ರೆಸ್ ಪ್ರಚಾರ

Mainashree
Updated On : 4 Apr 2014, 11:11 am

ಮೂಡಿಗೆರೆ: ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ಉತ್ತಮ ವಾತಾವರಣವಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಕೆ. ಜಯಪ್ರಕಾಶ್ ಹೆಗ್ಡೆ ತಿಳಿಸಿದರು.
ತಾಲೂಕಿನ ಅಂಗಡಿ ಗ್ರಾಮದಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡಿ, ಸಿದ್ದರಾಮಯ್ಯ ಅವರ ಸರ್ಕಾರ ಪ್ರತಿ ಕೆಜಿಗೆ 1ನಂತೆ ಅಕ್ಕಿ ನೀಡಿ ಜನರ ಹಸಿವೆ ನೀಗಿಸುವ ಕೆಲಸ ಮಾಡುತ್ತಿದೆ. ಕೇಂದ್ರ ಸರ್ಕಾರ ಮಾಡಿರುವ ವಿನೂತನ ಯೋಜನೆಗಳನ್ನು ಜನರಿಗೆ ತಿಳಿಸುವ ಕಾರ್ಯ ಮಾಡಬೇಕು ಎಂದರು.
ವಿಪ ಸದಸ್ಯೆ ಡಾ. ಮೋಟಮ್ಮ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಪಿ. ಮನು, ಜಿಲ್ಲಾಧ್ಯಕ್ಷ ಡಿ.ಎಲ್. ವಿಜಯಕುಮಾರ್, ಚಿತ್ರನಟಿ ಭವ್ಯ, ಡಿ.ಕೆ. ತಾರದೇವಿ ಸಿದ್ಧಾರ್ಥ, ಎ.ಜೆ. ಸುಬ್ರಾಯಗೌಡ, ಕೆಪಿಸಿಸಿಯ ಜಿ.ಎಚ್. ಹಾಲಪ್ಪಗೌಡ, ಕೃಷ್ಣೇಗೌಡ, ಮಹೇಶ್, ಜ್ಯೋತಿ ಹೇಮಶೇಖರ್, ಯು.ಎಚ್. ಹೇಮಶೇಖರ್, ಎಂ.ಎನ್.ಅಶ್ವತ್, ಮಹೇಶ್ ಸೇರಿದಂತೆ ಅನೇಕ ಗಣ್ಯರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement