ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಪ್ರತಿಭೆ ಹೊರತರಲು ಶಿಬಿರ ಸಹಕಾರಿ

Mainashree
Updated On : 4 Apr 2014, 11:14 am

ತರೀಕೆರೆ: ಮಕ್ಕಳ ಪ್ರತಿಭೆ ಪ್ರಕಾಶಿಸಲು ಬೇಸಿಗೆ ಶಿಬಿರಗಳು ಉತ್ತಮ ಅವಕಾಶವಾಗಿದೆ ಎಂದು ಪುರಸಭಾ ಮಾಜಿ ಅಧ್ಯಕ್ಷೆ, ಎನ್ಇಪಿಎಸ್ ವಿದ್ಯಾ ಸಂಸ್ಥೆ ಕಾರ್ಯದರ್ಶಿ ಹೇಮಲತಾ ರೇವಣ್ಣ ಹೇಳಿದರು.
ಪಟ್ಟಣದ ಪ್ರಕೃತಿಶ್ರೀ ಕಲಾ ಕುಟೀರ ವತಿಯಿಂದ ಬುಧವಾರ ಏರ್ಪಡಿಸಿದ್ದ  ಬೇಸಿಗೆ ಶಿಬಿರ ಸಂಭ್ರಮ ಉದ್ಘಾಟನೆ ನೆರವೇರಿಸಿ ಮಾತನಾಡಿ, ಬೇಸಿಗೆ ಶಿಬಿರ ಸಂಭ್ರಮ ಹೆಸರಿಗೆ ತಕ್ಕ ಹಾಗೆ ಮಕ್ಕಳಲ್ಲಿ ಸಂಭ್ರಮವನ್ನು ತಂದುಕೊಡುತ್ತದೆ ಎಂದು ತಿಳಿಸಿದರು.
ವಿಜಯಕುಮಾರ್ ಅವರು ಮಾತನಾಡಿ, ಪ್ರಕೃತಿಶ್ರೀ ಕಲಾ ಕುಟೀರದ ಅಧ್ಯಕ್ಷೆ ಉಮಾ ಪ್ರಕಾಶ್ ಅವರು ಮಕ್ಕಳಲ್ಲಿರುವ ಪ್ರತಿಭೆ ಹೊರತರುವ ಕೆಲಸ ಮಾಡುತ್ತಿದ್ದಾರೆ. ಮಕ್ಕಳಿಗೆ ಪೋಷಕರು ಮನೆಯಲ್ಲಿ ಉತ್ತಮ ಸಂಸ್ಕಾರ ನೀಡಬೇಕು, ಗುರುಗಳ ಜವಾಬ್ದಾರಿ ಗುರುತರವಾಗಿರುತ್ತದೆ ಎಂದರು.
ಕಲಾ ಕುಟೀರದ ಅಧ್ಯಕ್ಷೆ ಉಮಾ ಪ್ರಕಾಶ್ ಮಾತನಾಡಿ, ಮಕ್ಕಳನ್ನು ಕಂಡರೆ ಅಭಿಮಾನ ಪ್ರೀತಿ ಇರಬೇಕು, ನಾಳಿನ ಪ್ರಜೆಗಳಿಗೆ ವರ್ತಮಾನದಲ್ಲೇ ಒಳ್ಳೆಯ ಬುನಾದಿ ಹಾಕಿರಬೇಕು. ಹೆಚ್ಚು ಪುಸ್ತಕಗಳನ್ನು ಅಧ್ಯಯನ ಮಾಡಿದರೆ ಅದು ಮಸ್ತಕದಲ್ಲಿ ಉಳಿಯುವುದರ ಬಗ್ಗೆ ಅರಿವು ಮೂಡಿಸಬೇಕು ಹಾಗೂ ಶಿಬಿರದಲ್ಲಿ ಮಕ್ಕಳಿಂದಲೇ ರಚಿತವಾದ ಸಂತೆ ನಡೆಸಲಾಗುವುದು ಎಂದರು.
ಗಾಯತ್ರಿ, ಮನೋಜ್, ಮಕ್ಕಳು ಶಿಬಿರದಲ್ಲಿ ಭಾಗವಹಿಸಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement