ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಸಾಂಕ್ರಾಮಿಕ ರೋಗ ತಡೆಗೆ ನೈರ್ಮಲ್ಯಕ್ಕೆ ಒತ್ತು

Mainashree
Updated On : 4 Apr 2014, 11:14 am

ಕ.ಪ್ರ.ವಾರ್ತೆ  ತರೀಕೆರೆ ಏ. 3
ತಾಲೂಕಿನಲ್ಲಿ ಡೆಂಘೀ,  ಮಲೇರಿಯಾ, ಚಿಕನ್ಗುನ್ಯಾ ಇತ್ಯಾದಿ ಯಾವುದೇ ತರಹದ  ರೋಗಗಳು ಹರಡದಂತೆ ಯಶಸ್ವಿಯಾಗಿ ನಿಯಂತ್ರಿಸುವ ಹಿನ್ನಲೆಯಲ್ಲಿ ಗುರುವಾರ ಉಪವಿಭಾಗಾಧಿಕಾರಿಯವರ ಕಾರ್ಯಾಲಯದಲ್ಲಿ ಆರೋಗ್ಯ ಇಲಾಖೆ ವತಿಯಿಂದ ಉಪವಿಭಾಗಾಧಿಕಾರಿ ಅನುರಾಧ ಅವರ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳ ಸಭೆಯನ್ನು ಏರ್ಪಡಿಸಲಾಗಿತ್ತು.
ತಾಲೂಕು ವೈದ್ಯಾಧಿಕಾರಿ ಡಾ. ಚಂದ್ರಶೇಖರ್ ಮಾತನಾಡಿ ಕಳೆದ ಜನವರಿಯಿಂದ ತಾಲೂಕಿನಲ್ಲಿ ಐದು ಮಲೇರಿಯಾ ಪ್ರಕರಣ, ಮೂರು ಡೆಂಗ್ಯೂ ಪ್ರಕರಣಗಳು ಕಂಡುಬಂದಿದ್ದು ಚಿಕಿತ್ಸೆ ನೀಡಿ ಗುಣ ಪಡಿಸಲಾಗಿದೆ.  ಪ್ರಸ್ತುತ, ಸಾಂಕ್ರಾಮಿಕ ರೋಗಗಳಾದ ಡೆಂಘೀ, ಮಲೇರಿಯಾ ವಾಂತಿ ಭೇದಿ  ಪ್ರಕರಣಗಳು ಬಾರದಂತೆ ಎಲ್ಲಾ ಇಲಾಖೆಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸುವಂತೆ ಮನವಿ ಮಾಡಿದರು.
ನೈರ್ಮಲ್ಯಕ್ಕೆ ಒತ್ತು: ಉಪವಿಭಾಗಾಧಿಕಾರಿ ಅನುರಾಧ ಅವರು ಮಾತನಾಡಿ, ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಶುದ್ದವಾದ ಕುಡಿಯುವ ನೀರನ್ನು ಸಮರ್ಪಕವಾಗಿ ಸರಬರಾಜು ಮಾಡುವಲ್ಲಿ ಮತ್ತು ಚರಂಡಿಗಳಲ್ಲಿ ನೀರು ನಿಲ್ಲದಂತೆ ಹಾಗು ಪರಿಸರ ಸ್ವಚ್ಛತೆ ನೈರ್ಮಲ್ಯದ ಕಡೆಗೆ ಹೆಚ್ಚು ಗಮನ ನೀಡಬೇಕೆಂದು ಸೂಚಿಸಿದ ಅವರು ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಲಾರ್ವ ಸಮೀಕ್ಷೆ ನೆಡೆಸಲು ಆಶಾ ಕಾರ್ಯಕರ್ತಯರು, ಅಂಗನವಾಡಿ ಕಾರ್ಯಕರ್ತರು, ಆರೋಗ್ಯ ಇಲಾಖೆ ಸಿಬ್ಬಂದಿ ಪ್ರತಿ ಮನೆಗೂ ಭೇಟಿ ನೀಡಲಿದ್ದು ಸಾರ್ವಜನಿಕರು ಸಹಕರಿಸಬೇಕೆಂದು ಮನವಿ ಮಾಡಿದರು.
 ಸಾರ್ವಜನಿಕರ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ಮಲ್ಲಿಕಾರ್ಜುನ್, ಡಾ. ಪ್ರಸನ್ನಕುಮಾರ್ ಸಣ್ಣಕ್ಕಿ, ತಾಲೂಕಿನ ಎಲ್ಲಾ ವೈದ್ಯಾದಿಕಾರಿಗಳು, ಪುರಸಭೆ ಆರೋಗ್ಯಾಧಿಕಾರಿ ಮಹೇಶ್, ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement