ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಕ್ರೈಸ್ತ ಧರ್ಮಾಧ್ಯಕ್ಷರ ಆಶೀರ್ವಾದ ಪಡೆದ ಹೆಗ್ಡೆ

Vishwanath S
Updated On : 5 Apr 2014, 11:20 am

ಚಿಕ್ಕಮಗಳೂರು: ಬಡ ಜನರಿಗೆ ಮತ್ತು ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಸ್ಪಂದಿಸುವ ಜನಪ್ರತಿನಿಧಿಗಳಿಗೆ ಮತದಾರ ಕೈಬಿಡುವುದಿಲ್ಲ ಎಂದು ಕ್ರೈಸ್ತ ದೇವಾಲಯಗಳ ಧರ್ಮಾಧ್ಯಕ್ಷ ಡಾ. ಅಂತೋಣಿಸ್ವಾಮಿ ಹೇಳಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಕೆ. ಜಯಪ್ರಕಾಶ್ ಹೆಗ್ಡೆ ಅವರು ಶುಕ್ರವಾರ ಇಲ್ಲಿನ ಜ್ಯೋತಿನಗರದ ಬಿಷಪ್ ಹೌಸ್‌ನಲ್ಲಿ ಭೇಟಿಯಾದ ಸಂದರ್ಭದಲ್ಲಿ ಆಶೀರ್ವದಿಸಿ ಮಾತನಾಡಿ, ಪ್ರಾಮಾಣಿಕತೆ ಮೆರೆದು ಜನರಿಗೆ ಹತ್ತಿರ ವಿರುವ ಯಾವುದೇ ಜನಪ್ರತಿನಿಧಿಗೆ ಮತದಾರ ಸ್ಪಂದಿಸುತ್ತಾನೆ ಎಂದು ತಿಳಿಸಿದರು.
ಕೆ. ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಯಾವುದೇ ಜನಪರ ಕಾರ್ಯ ಮಾಡುವಾಗ ಎಲ್ಲ ಧರ್ಮದ ಗುರು- ಹಿರಿಯರನ್ನು ಕಂಡು ಆಶೀರ್ವಾದ ಪಡೆಯುವುದು ನನ್ನ ವಾಡಿಕೆ, ಅಂತೇಯೆ ಇಂದು ಬಿಷಪ್ ಅವರನ್ನು ಕಂಡಿದ್ದೇನೆ. ಮನಪೂರ್ವಕವಾಗಿ ಆಶೀರ್ವದಿಸಿದ್ದಾರೆ ಎಂದರು.
ಸಂಸದನಾಗಿ ನನಗೆ ಸಿಕ್ಕ ಕಡಿಮೆ ಅವಧಿಯಲ್ಲಿ ಯಾವ ವರ್ಗವನ್ನು ಕಡೆಗಣಿಸದೆ ಎಲ್ಲರನ್ನು ಸಮಾನವಾಗಿ ಕಂಡು ವೈಯುಕ್ತಿಕವಾಗಿ ಸ್ಪಂದಿಸಿರುವುದು ಮತ್ತು ನಾನು ಮಾಡಿದ ಅಭಿವೃದ್ಧಿ ಕಾರ್ಯಗಳು ಶ್ರೀರಕ್ಷೆಯಾಗಲಿದ್ದು ಜನ ಮತ್ತೊಮ್ಮೆ ನನ್ನ ಪುನಾರಾಯ್ಕೆ ಬಯಸಿದ್ದಾರೆ ಎಂಬ ನಂಬಿಕೆ ಇದೆ ಎಂದರು.
ವಿಧಾನಪರಿಷತ್ ಸದಸ್ಯೆ ಗಾಯಿತ್ರಿ ಶಾಂತೇಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಡಿ.ಎಲ್. ವಿಜಯಕುಮಾರ್, ಬಿ.ಎಂ. ಸಂದೀಪ್, ಎ.ಎನ್. ಮಹೇಶ್, ನಗರಸಭೆ ಸದಸ್ಯರಾದ ಹೆಚ್.ಎಸ್. ಪುಟ್ಟಸ್ವಾಮಿ, ರೂಬಿನ್ ಮೋಸಸ್, ಜೇಮ್ಸ್, ಯದುಕುಮಾರ್, ತರೆಸ್ಸಾ ಲೋಬೋ, ಸಂಪತ್ ರಾಜ್, ಜಾರ್ಜ್ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement