ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಕ್ಷಯ ನಿರ್ಮೂಲನೆ ಕಾರ್ಯಾಗಾರ

Rashmi Kasaragodu
Updated On : 7 Apr 2014, 11:13 am

ಕ.ಪ್ರ.ವಾರ್ತೆ    ಶೃಂಗೇರಿ    ಏ. 6
ಕ್ಷಯರೋಗ ಮೈಕ್ರೋಬ್ಯಾಟ್ಟೀರಿಯಂ ವೈರಾಣುವಿನಿಂದ ಬರುವ ರೋಗವಾಗಿದ್ದು, ಇದು ಸಾಂಕ್ರಾಮಿಕ ರೋಗವಲ್ಲ ಎಂದು ತಾಲೂಕು ಶಿಕ್ಷಣಾಧಿಕಾರಿ ಸುಧಾಕರ ಅಗಳಗಂಡಿ ತಿಳಿಸಿದರು.
ಅವರು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಜೆಸಿ ಸಂಸ್ಥೆ, ಸರ್ಕಾರಿ ಪದವಿ ಕಾಲೇಜು ಹಾಗೂ ಸಂಘ ಸಂಸ್ಥೆ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಕ್ಷಯರೋಗ ನಿರ್ಮೂಲನೆ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕ್ಷಯ ರೋಗದ ಬಗ್ಗೆ ಮುನ್ನೆಚ್ಚೆರಿಕೆ, ಜಾಗೃತಿ ಅಗತ್ಯ, ಯಾವುದೇ ರೀತಿ ಭಯ ಬೇಡ. ಇಂತಹ ರೋಗದ ಬಗ್ಗೆ ಲಕ್ಷಣ ಕಂಡು ಬಂದಲ್ಲಿ ಕೂಡಲೇ ವೈದ್ಯರನ್ನು ಭೇಟಿ ಮಾಡಿ ಸೂಕ್ತ ಸಲಹೆ ಚಿಕಿತ್ಸೆ ಪಡೆದುಕೊಂಡು ಕ್ಷಯದಿಂದ ಗುಣಮುಖರಾಗಬಹುದು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜೆಸಿ ಅಧ್ಯಕ್ಷ ರಮೇಶ್, ಜನ ಇಂತಹ ಕಾರ್ಯಕ್ರಮಗಳ ಸದ್ಬಳಕೆ ಮಾಡಿಕೊಲ್ಳುವುದರ ಜೊತೆಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಪ್ರೊ.ಕೆ.ಜಿ. ಸಿದ್ದಲಿಂಗೇಗೌಡ, ಡಾ. ಅನಿತ್ ಕುಮಾರ್ ಮೊದಲಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement