'ದೇಶ ರಕ್ಷಣೆ, ಅಭಿವೃದ್ಧಿಗೆ ಬಿಜೆಪಿ ಅವಶ್ಯ'
ಚಿಕ್ಕಮಗಳೂರು: ದೇಶದ ರಕ್ಷಣೆ, ಅಭಿವೃದ್ಧಿ ಮತ್ತು ಬಡತನ ನಿರ್ಮೂಲನೆಗೆ ಬಿಜೆಪಿ ನೇತೃತ್ವದ ಸರ್ಕಾರದ ಅವಶ್ಯಕತೆ ಇದೆ ಎಂದು ವಿಧಾನಪರಿಷತ್ ಸದಸ್ಯ ಬಿ.ಜೆ. ಪುಟ್ಟಸ್ವಾಮಿ ಹೇಳಿದ್ದಾರೆ.
ನಗರದ ವಿಜಯಪುರ ಸಮುದಾಯ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಗಾಣಿಗರ ಸಮಾವೇಶದಲ್ಲಿ ಮಾತನಾಡಿದರು.
ನಮ್ಮ ಸಮಾಜದಲ್ಲಿ ಹುಟ್ಟಿದ ಮೋದಿಯವರು ಟೀ ಮಾರಿ ಜೀವನ ಮಾಡುವ ಜತೆಗೆ ಪುಡಿಗಾಸು ಸಂಪಾದಿಸಿ, ವಿದ್ಯಾರ್ಥಿ ಜೀವನದಲ್ಲೇ ಶಿಸ್ತಿನ ಸಂಘ ಪರಿವಾರದ ಮೂಲಕ ಬಿಜೆಪಿಯಲ್ಲಿ ಬೆಳೆಯುತ್ತಿರುವುದು ಹೆಮ್ಮೆಯ ವಿಷಯ ಎಂದರು.
ಮುಂದುವರಿದ ಜನಾಂಗವಿರುವ ಗುಜರಾತ್ನಲ್ಲಿ ಸಿಎಂ ಆಗಿ ಅಭಿವೃದ್ಧಿ ಮೂಲಕ ಜನಮನದಲ್ಲಿ ಮನೆ ಮಾಡಿದವರು. ಭಾರತ ದೇಶದಲ್ಲಿ ಯಾರು ಸೋಮಾರಿಗಳಾಗಿ, ಶಿಕ್ಷಣ ವಂಚಿತರಾಗಿರಬಾರದೆಂಬ ಚಿಂತನೆಯನ್ನು ಮೋದಿ ಅವರು ಹೊಂದಿದ್ದಾರೆ ಎಂದು ಹೇಳಿದರು.
ಜಿಲ್ಲಾ ಗಾಣಿಗರ ಸಂಘದ ಅಧ್ಯಕ್ಷ ಸತ್ಯನಾರಾಯಣ ಶೆಟ್ಟಿ, ನಗರಸಭೆ ಮಾಜಿ ಅಧ್ಯಕ್ಷ ಸಿ.ಆರ್. ಪ್ರೇಮ್ಕುಮಾರ್, ಬಿಜೆಪಿ ನಗರಾಧ್ಯಕ್ಷ ವರಸಿದ್ದಿ ವೇಣುಗೋಪಾಲ್, ಟೌನ್ ಕೋ ಆಪರೇಟೀವ್ ಸೊಸೈಟಿ ಅಧ್ಯಕ್ಷ ಸಿ.ವಿ. ಕುಮಾರ್, ಉಪಾಧ್ಯಕ್ಷೆ ಆಶಾ, ಹೊನ್ನಪ್ಪ ಶೆಟ್ಟಿ, ನಾಗರಾಜ್, ಶ್ರೀನಿವಾಸ್,ದಯಾನಂದ್, ಮಂಜುಳಾ ನಾಗರಾಜ್, ಸಿ.ಆರ್. ಕೇಶವಮೂರ್ತಿ, ಮಂಜುಳಾ, ಮಧುಕುಮಾರ್ರಾಜ್ ಅರಸ್ ಉಪಸ್ಥಿತರಿದ್ದರು.