ಮನೆ ಮನೆಗೆ ತೆರಳಿ ಬಿಜೆಪಿ ಮತಯಾಚನೆ
ಕಡೂರು: ಬಿಜೆಪಿ ನಗರ ಘಟಕದಿಂದ ಕಡೂರು ಪಟ್ಟಣದಾದ್ಯಂತ ಮುಖಂಡರು ಹಾಗು ಕಾರ್ಯಕರ್ತರು ಮನೆಮನೆಗೆ ತೆರಳಿ ಮತಯಾಚನೆ ನಡೆಸಿದರು.
ನಗರ ಘಟಕದ ಅಧ್ಯಕ್ಷ ಎ.ಮಣಿ ನೇತ್ವೃತ್ವದಲ್ಲಿ ಮಹಿಳಾ ಕಾರ್ಯಕರ್ತರು ಸೇರಿ ವಿವಿಧ ವಾರ್ಡುಗಳಿಗೆ ತೆರಳಿ ಪ್ರಚಾರ ನಡೆಸುವ ಮೂಲಕ ಹಾಸನ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿ.ಹೆಚ್.ವಿಜಯಶಂಕರ್ರವರ ಪರ ಮತಯಾಚನೆ ಮಾಡಿದರು.
ಬಿಜೆಪಿಗೆ ಮತ ನೀಡಿ: ಇದೇ ಸಂದರ್ಭದಲ್ಲಿ ಮಾತನಾಡಿದ ಮಣಿ, ಈ ಭಾರಿ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಭವಿಷ್ಯದ ಪ್ರಧಾನಿ ಮೋದಿಯವರ ಅಲೆ ಕೆಲಸ ಮಾಡುವ ಮೂಲಕ ಈ ಭಾರೀ ಬದಲಾವಣೆ ಆಗಲಿದೆ. ಹಾಸನ ಲೋಕಸಭಾ ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷವು ಗೆಲುವಿಗಾಗಿ ಸರಳ ಹಾಗು ಸಜ್ಜನ ರಾಜಕಾರಣಿಯಾಗಿರುವ ವಿಜಯಶಂಕರ್ ಅವರಿಗೆ ಎಲ್ಲ ವರ್ಗಗಳೂ ಮತ ನೀಡಲಿವೆ ಎಂದರು.
ಕಡೂರು ವಿಧಾನಸಭಾ ಕ್ಷೇತ್ರ ಸೇರಿದಂತೆ ಎಲ್ಲೆಡೆ ಬಿಜೆಪಿ ಹವಾ ಬೀಸತ್ತಿದೆ. ಯುವಕರು, ಯುವತಿಯರು, ವೃದ್ದರೂ ಎಲ್ಲರೂ ಬದಲಾವಣೆ ಬಯಸಿ ಭಾರತದ ಉತ್ತಮ ಭವಿಷ್ಯಕ್ಕಾಗಿ ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲಪಡಿಸಲು ವಿಜಯಶಂಕರ್ಗೆ ಮತದಾರ ಪ್ರಭುಗಳು ಮತನೀಡಿ ಗೆಲ್ಲಿಸಬೇಕು ಎಂದ ಮನವಿ ಮಾಡಿದರು. ಬಿಜೆಪಿ ಮುಖಂಡರಾದ ಕೋಟೆ ಆನಂದ್, ಅಂಬೇಡ್ಕರ ನಗರ ಸುರೇಶ್, Ú ಶೋಭಾ, ಗೀತಾ, ಮಂಜುಳ ಮತ್ತಿತರರು ಭಾಗವಹಿಸಿದ್ದರು.
ಅಪಘಾತ
ಕೊಪ್ಪ: ಕೊಪ್ಪ ತಾಲೂಕು ಬಿಜೆಪಿ ಯೂವ ಮೋರ್ಚಾದ ವತಿಯಿಂದ ಭಾನುವಾರ ಜಯಪುರದಿಂದ ಕೊಪ್ಪ ಪಟ್ಟಣದವರೆಗೆ ಹಮ್ಮಿಕೊಂಡಿದ್ದ ಬೈಕ್ ಜಾಥಾ ಸಂದರ್ಭದಲ್ಲಿ ಕಲ್ಕೇರೆ ಬಳಿ ಬೈಕ್ನಿಂದ ಆಯತಪ್ಪಿ ಉರುಳಿದ ಪಟ್ಟಣ ಪಂಚಾಯಿತಿಯ ಸದಸ್ಯೆ ವಾಣಿ ಸತೀಶ್ ಅವರ ಬಲಗೈ ಮುರಿದಿದ್ದು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ.