ಸ್ವಸಹಾಯ ಸಂಘಗಳಿಗೆ ಹಣ ವಿತರಣೆ
ತರೀಕೆರೆ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸಮೀಪದ ಲಿಂಗದಹಳ್ಳಿ ಹೋಬಳಿ ಪ್ರಗತಿ ಬಂದು ಸ್ವಸಹಾಯ ಸಂಘಗಳ ಸದಸ್ಯರ ಉಳಿತಾಯ ಹಣದ ಬಡ್ಡಿ ರು. 8 ಲಕ್ಷ ವಿತರಿಸುವ ಕಾರ್ಯಕ್ರಮವನ್ನು ಲಿಂಗದಹಳ್ಳಿಯಲ್ಲಿ ಏರ್ಪಡಿಸಲಾಗಿತ್ತು.
ಯೋಜನೆಯ ಲಿಂಗದಹಳ್ಳಿ ಹೋಬಳಿಯ ಪ್ರಗತಿಬಂಧು ಸ್ವಸಹಾಯ ಸಂಘಗಳ ಸದಸ್ಯರು ಇಲ್ಲಿಯವರೆಗೂ ವಾರಕ್ಕೆ ರು. 10 ರಂತೆ ಉಳಿತಾಯ ಮಾಡಿದ್ದ ಹಣ ರು. 1 ಕೋಟಿ 14 ಲಕ್ಷ 2012-14ನೇ ಸಾಲಿನ ಬಡ್ಡಿ ಹಣ ಶೇ.7 ರಂತೆ ಒಟ್ಟು ರು. 8 ಲಕ್ಷಗಳನ್ನು ಲಿಂಗದಹಳ್ಳಿ ಬಿ. ಕಾರ್ಯಕ್ಷೇತ್ರದ ಯೋಜನಾ ಕಚೇರಿಯಲ್ಲಿ ವಲಯ ಮೇಲ್ವಿಚಾರಕ ಅರುಣ್ಕುಮಾರ್ ಅವರು ಸಂಘಗಳಿಗೆ ವಿತರಿಸಿದರು.
ಯೋಜನೆ ಮೇಲ್ವಿಚಾರಕ ದಿನೇಶ್, ಸೇವಾ ಪ್ರತಿನಿಧಿ ಮೋಹನ್, ಕ್ರೀಡಾ ಸಹಾಯಕ ಸುರೇಶ್ ಭಾಗವಹಿಸಿದ್ದರು.