ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಈ ಬಾರಿ ಕೇಂದ್ರದಲ್ಲಿ ಮೋದಿ ಸರ್ಕಾರ; ವಿಶ್ವಾಸ

Rashmi Kasaragodu
Updated On : 9 Apr 2014, 10:37 am

ಬಾಳೆಹೊನ್ನೂರು: ಈ ಬಾರಿ ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೇರುವುದು ಖಚಿತ ಎಂದು ತಾಲೂಕು ಬಿಜೆಪಿ ಅಧ್ಯಕ್ಷ ಭಾಸ್ಕರ್ ವನಿಲ್ಲಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪಟ್ಟಣದಲ್ಲಿ ಮಂಗಳವಾರ ನಡೆದ ನರೇಂದ್ರ ಮೋದಿ ಅವರ ಸಾಕ್ಷ್ಯಚಿತ್ರ ವಿಡಿಯೋ ಪ್ರದರ್ಶನದ ಬಳಿಕ ಮಾತನಾಡಿ, ದೇಶದಲ್ಲೇ ಗುಜರಾತ್ ರಾಜ್ಯವು ಅಭಿವೃದ್ಧಿಯಲ್ಲಿ ಪ್ರಥಮ ಸ್ಥಾನದಲ್ಲಿದೆ. ನಮೋ ಪ್ರಧಾನಿಯಾದಲ್ಲಿ ದೇಶವೂ ನಂ.1 ಸ್ಥಾನಕ್ಕೇರಲಿದ್ದು, ವಿಶ್ವವೇ ಇತ್ತ ತಿರುಗಿ ನೋಡುವಂತಾಗಲಿದೆ ಎಂದರು.
ಮೋದಿ ಸಮರ್ಥ ನಾಯಕನಾಗಿದ್ದು, ಭ್ರಷ್ಟಾಚಾರ, ಭಯೋತ್ಪಾದನೆ, ನಿರುದ್ಯೋಗ, ಗ್ರಾಮೀಣ ಪ್ರದೇಶದ ಮೂಲ ಸಮಸ್ಯೆ ಬಗೆಹರಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ಹೇಳಿದರು.
ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವು ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಹಗರಣಗಳ ಗೂಡಾಗಿದ್ದು, ದೇಶದ ಏಕತೆಗೆ ಮಾರಕವಾಗಿದೆ. ದೇಶವನ್ನು ನೈತಿಕ, ಸಾಂಸ್ಕೃತಿಕ ಹಾಗೂ ಆರ್ಥಿಕವಾಗಿ ದಿವಾಳಿತನದತ್ತ ತಳ್ಳಿದ ಸರ್ಕಾರ ಇದಾಗಿದೆ ಎಂದರು.
ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಅಶ್ರಫ್, ಹೋಬಳಿ ಪ್ರಧಾನ ಕಾರ್ಯದರ್ಶಿ ಪ್ರಭಾಕರ್ ಪ್ರಣಸ್ವಿ ಉಪಸ್ಥಿತರಿದ್ದರು.
ಬಸ್ ನಿಲ್ದಾಣ, ನ.ರಾ. ಪುರ ರಸ್ತೆಯ ಮೀನು ಮಾರ್ಕೆಟ್, ಮಾಗುಂಡಿ, ಬನ್ನೂರು, ಗಡಿಗೇಶ್ವರ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಮೋದಿ ಅವರ ಅಭಿವೃದ್ಧಿ ಕುರಿತಾದ ವಿಡಿಯೋ ಸಾಕ್ಷ್ಯಚಿತ್ರ ಪ್ರದರ್ಶನ ಮಾಡಲಾಯಿತು.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement