ಬಾಳೆಹೊನ್ನೂರು ಸುತ್ತಮುತ್ತ ಮಳೆ
ಬಾಳೆಹೊನ್ನೂರು: ಬಾಳೆಹೊನ್ನೂರು ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ವಿವಿಧ ಪ್ರದೇಶಗಳಲ್ಲಿ ಮಂಗಳವಾರ ಮಧ್ಯಾಹ್ನದಿಂದ ಪುನಃ ಮಳೆ ಸುರಿಯುತ್ತಿದೆ.
ಮಧ್ಯಾಹ್ನ ಮೂರು ಗಂಟೆಯಿಂದ ಸಂಜೆಯವರೆಗೂ ಜಡಿ ಮಳೆ ಮುಂದುವರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಸಂಜೆ ಏಳು ಗಂಟೆಯಾದರೂ ಮಳೆ ಸುರಿಯುತ್ತಲೇ ಇತ್ತು. ಸುತ್ತಮುತ್ತಲಿನ ಬನ್ನೂರು, ಮಾಗುಂಡಿ, ಸೀಗೋಡು, ಹಿರೇಗದ್ದೆ, ರಂಭಾಪುರಿಮಠ, ಕಡ್ಲೆಮಕ್ಕಿ, ಮೆಣಸುಕೊಡಿಗೆ, ಸೀಕೆ, ಸಿ.ಆರ್.ಎಸ್. ಭಾಗಗಳಲ್ಲೂ ಇದೇ ರೀತಿ ಮಳೆ ಮುಂದುವರಿದಿತ್ತು.