'ಮೋದಿ ಅಲೆ ಕಂಡು ಕಾಂಗ್ರೆಸ್ಗೆ ನಡುಕ'
ಚಿಕ್ಕಮಗಳೂರು: ಮೋದಿ ಪ್ರಧಾನಿ ಆಗುವುದು ನಿಶ್ಚಿತ ಎಂಬ ವಾತಾವರಣ ಕಾಂಗ್ರೆಸ್ಸಿಗರಿಗೆ ನಡುಕ ಉಂಟು ಮಾಡಿದೆ ಎಂದು ಬಿಜೆಪಿ ನಗರಾಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಆರೋಪಿಸಿದ್ದಾರೆ.
ಬಿಜೆಪಿ ನಗರ ಘಟಕ ಸೋಮವಾರ ಹಮ್ಮಿಕೊಂಡಿದ್ದ ಮತಯಾಚನೆ ಕಾರ್ಯಕ್ರಮದಲ್ಲಿ ಮಾತನಾಡಿ, ಕೇಂದ್ರದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ಸರ್ಕಾರದ ಲಕ್ಷಾಂತರ ಕೋಟಿ ಹಗರಣಗಳು ಕಣ್ಮುಂದೇಯೇ ಇದೆ. ಅದರ ಪ್ರತಿಫಲವಾಗಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ರಾಷ್ಟ್ರ ನಾಯಕರು ಕೋಟಿ, ಕೋಟಿ ಹಣ ನೀಡಿ ಗೆಲ್ಲಿಸಬಹುದೆಂಬ ಭ್ರಮೆಯಲ್ಲಿರುವ ಕಾಂಗ್ರೆಸ್ ನಾಯಕರಿಗೆ ಮತದಾರರು ತಕ್ಕ ಉತ್ತರ ನೀಡಲಿದ್ದಾರೆ ಎಂದರು.
ಮತಯಾಚನೆ ವೇಳೆ ನಗರಸಭೆ ಅಧ್ಯಕ್ಷ ಕೆ.ಎಸ್. ಪುಷ್ಪರಾಜ್, ಸದಸ್ಯರಾದ ಎಚ್.ಡಿ. ತಮ್ಮಯ್ಯ, ಕೋಟೆ ಕೃಷ್ಣ, ಮುತ್ತಯ್ಯ, ಲೀಲಾ, ಶ್ಯಾಮಲರಾವ್, ಕವಿತಾ ಶೇಖರ್, ಹಿತಾಕ್ಷಿ ಚನ್ನಕೇಶವ, ಅಬ್ದುಲ್ ರೆಹಮಾನ್ ಖುರೇಷಿ, ದೇವರಾಜ್ ಶೆಟ್ಟಿ ಹಾಗೂ ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು.