ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ವಿದ್ಯಾರ್ಥಿಗಳಿಗೆ ಸಂವಹನ ಕೌಶಲ್ಯ ಮುಖ್ಯ

Rashmi Kasaragodu
Updated On : 9 Apr 2014, 10:43 am

ಕ.ಪ್ರ.ವಾರ್ತೆ    ಚಿಕ್ಕಮಗಳೂರು    ಏ. 8
ಸಂವಹನ ಕೌಶಲ್ಯ ವಿದ್ಯಾರ್ಥಿಗಳ ಭವಿಷ್ಯ ರೂಪಿಸುತ್ತದೆ ಎಂದು ಎಂವಿಇಐ ಕಾರ್ಯದರ್ಶಿ ಹಬೀಬಾ ಎನ್. ಪಾಷ ಹೇಳಿದರು.
ನಗರದ ಮೌಂಟೆನ್ ವ್ಯೂ ಕಾಲೇಜ್ ಆಫ್ ಮ್ಯಾನೇಜ್‌ಮೆಂಟ್ ಆ್ಯಂಡ್ ಸೈನ್ಸಸ್‌ನಲ್ಲಿ ಮಂಗಳವಾರ ನಡೆದ ವಿದ್ಯಾರ್ಥಿ ವೇದಿಕೆ ಇಂಟೆಗ್ರಾ 2013- 14 ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಭಾಷೆ, ಸಂವಹನಕ್ಕೆ ಬಹಳ ಮುಖ್ಯ. ಮತ್ತೊಬ್ಬರಿಗೆ ಅರ್ಥ ಮಾಡಿಸುವುದೇ ಸಂವಹನ ಕ್ರಿಯೆ. ಪರೀಕ್ಷೆ ಇರಲಿ, ಉದ್ಯೋಗಕ್ಕಾಗಿ ಸಂದರ್ಶನ ಎದುರಿಸುವಾಗ ನಮಗೆ ತಿಳಿದಿರುವ ಸಂಗತಿಗಳನ್ನು ಪರಿಣಾಮಕಾರಿಯಾಗಿ ಮುಂದಿಡುವ ಜಾಣ್ಮೆ ಮತ್ತು ಕೌಶಲ್ಯ ಪ್ರಮುಖವಾಗುತ್ತದೆ. ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಲು, ಬದುಕಿಗೆ ಭದ್ರ ಬುನಾದಿ ಹಾಕಲು ಸಂವಹನ ಕೌಶಲ್ಯ ಸಹಕಾರಿ ಎಂದ ಹಬೀಬಾ, ಸಾಮಾನ್ಯ ಜ್ಞಾನದ ಅರಿವು ಅಗತ್ಯ. ಉತ್ತಮ ಪುಸ್ತಕ ಓದುವುದು ಜತೆಗೆ ದೂರದರ್ಶನದಲ್ಲಿ ಆಯ್ದ ಕಾರ್ಯಕ್ರಮ ನೋಡುವುದರಿಂದ ಕೌಶಲ್ಯ ಹೆಚ್ಚಿಸಿಕೊಳ್ಳಬಹುದು ಎಂದರು.
ಪ್ರಾಂಶುಪಾಲ ಪ್ರೊ. ಇಮ್ತಿಯಾಜ್ ಅಲಿಬೇಗ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ನಾಯಕತ್ವ, ಸಂವಹನ ಕೌಶಲ್ಯ, ಕಲಿತ ಸಂಗತಿಗಳ ಪ್ರಾಯೋಗಿಕ ಬಳಕೆ, ಕಾರ್ಪೋರೇಟ್ ಜಗತ್ತಿನ ಬಗ್ಗೆ ಅರಿವು ಮೂಡಿಸುವ ಹಿನ್ನೆಲೆಯಲ್ಲಿ ಇಂಟೆಗ್ರಾ ಮೂಲಕ ಮೂರು ದಿನಗಳ ವಿವಿಧ ಸ್ಪರ್ಧೆ ಏರ್ಪಡಿಸಿ ವಿದ್ಯಾರ್ಥಿಗಳಿಗೆ ವೇದಿಕೆ ಕಲ್ಪಿಸಲಾಗಿದೆ ಎಂದರು.
ಎಬಿಸಿ ಕಂಪನಿ ಹಿರಿಯ ವ್ಯವಸ್ಥಾಪಕ ಜಾವೀದ್ ಫರ್ವೀಜ್ ಇಂಟೆಗ್ರಾ ಉದ್ಘಾಟಿಸಿದರು. ಆಡಳಿತಾಧಿಕಾರಿ ಭದ್ರೇಗೌಡ, ಪ್ರೌಢಶಾಲಾ ಮುಖ್ಯ ಶಿಕ್ಷಕಿ ಗೀತಾ ಸುಬ್ರಾಯ, ಫರಜಾನಾಷೇಕ್, ಸಾಂಸ್ಕೃತಿಕ ಕಾರ್ಯದರ್ಶಿ ಪರಮೇಶ್ವರಿ, ಇಂಟೆಗ್ರಾ ಸಂಯೋಜಕರಾದ ಮಹಮ್ಮದ್ ಇಸ್ಮಾಯಿಲ್ ಮತ್ತು ಮುಖರಮ್ ವೇದಿಕೆಯಲ್ಲಿದ್ದರು. ವಿದ್ಯಾರ್ಥಿಗಳಾದ ಸಹನಾ ಸ್ವಾಗತಿಸಿದರು. ಕರಿಷ್ಮಾ ನಿರೂಪಿಸಿದರು. ಆಯೇಷಾ ಸಿದ್ದಿಕ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement