ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಮಳೆ-ಗಾಳಿ: ಹಲವೆಡೆ ಧರೆಗುರುಳಿದ ಮರ

Mainashree
Updated On : 10 Apr 2014, 11:09 am

ಕ.ಪ್ರ.ವಾರ್ತೆ | ಚಿಕ್ಕಮಗಳೂರು |ಏ.9
ಜಿಲ್ಲೆಯ ಮಲೆನಾಡಿನಲ್ಲಿ ಬುಧವಾರ ಮತ್ತೆ ಮಳೆ ಸುರಿಯಿತು.
ಮಧ್ಯಾಹ್ನ 2 ಗಂಟೆಯ ನಂತರದಲ್ಲಿ ಮೂಡಿಗೆರೆ, ಎನ್.ಆರ್. ಪುರ, ಚಿಕ್ಕಮಗಳೂರು, ಶೃಂಗೇರಿ ತಾಲೂಕುಗಳ ಹಲವೆಡೆ ಮಳೆ ಬಂದಿತು.
ಮಳೆಯ ನಡುವೆ ಆಗಾಗ ಗುಡುಗು ಕಾಣಿಸಿಕೊಂಡರೂ ಸಂಜೆಯವರೆಗೆ ನಿರಂತರವಾಗಿ ಮಳೆ ಬರುತ್ತಿದ್ದರಿಂದ ಮುಂಗಾರು ಮಳೆಯ ವಾತಾವರಣ ನಿರ್ಮಾಣಗೊಂಡಿತ್ತು.
ಚಿಕ್ಕಮಗಳೂರು ಬುಧವಾರ ಸಂತೆಯ ದಿನವಾಗಿದ್ದರಿಂದ ವ್ಯಾಪಾರಸ್ಥರಿಗೆ ಹಾಗೂ ಗ್ರಾಹಕರಿಗೆ ತುಂಬಾ ತೊಂದರೆಯಾಯಿತು. ಇನ್ನು ಮೂಡಿಗೆರೆ ತಾಲೂಕಿನಲ್ಲಿ ಬಲವಾಗಿ ಬೀಸಿದ ಗಾಳಿಗೆ ಹಲವೆಡೆ ಮರಗಳು ಬಿದ್ದಿದ್ದರಿಂದ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿತ್ತು. ಕಳೆದ ಎರಡು ದಿನಗಳಿಂದ ಜಿಲ್ಲೆಯ ಮಲೆನಾಡಿನಲ್ಲಿ ಮಳೆಯಿಂದಾಗಿ ವಾತಾವರಣ ಹಿತಕರವಾಗಿದೆ.
ಗುಡುಗು ಸಹಿತ ಮಳೆ
ನರಸಿಂಹರಾಜಪುರ: ಕಳೆದ ಎರಡು ದಿನಗಳಿಂದ ತಾಲೂಕಿನ ಕುದುರೆಗುಂಡಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಗಾಳಿ, ಗುಡುಗು ಸಹಿತ ಮಳೆ ಬಂದಿದ್ದು ಗಾಳಿಯಿಂದ ಅಲ್ಲಲ್ಲಿ ನೇಂದ್ರ ಬಾಳೆ ನೆಲಕ್ಕೆ ಉರುಳಿದೆ.
ಗಾಳಿಯಿಂದಾಗಿ ಬಿದಿರು, ಮರದ ಗೆಲ್ಲುಗಳು ವಿದ್ಯುತ್ ತಂತಿಯ ಮೇಲೆ ಬೀಳುತ್ತಿದ್ದು, ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ನ.ರಾ.ಪುರ-ಬಾಳೆಹೊನ್ನೂರು ಮುಖ್ಯ ರಸ್ತೆಯಲ್ಲಿ ಕೆಲವು ಮರಗಳು ಬಿದ್ದು ಕೆಲವು ಸಮಯ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಸೋಮವಾರ ಮತ್ತು ಮಂಗಳವಾರ ಸಂಜೆ ಬಂದ ಮಳೆಯಿಂದಾಗಿ ಬಿಸಿಲಿನ ಜಳದಿಂದ ಕಂಗೆಟ್ಟಿದ್ದ ಜನರು ನೆಮ್ಮದಿಯ ಉಸಿರು ಬಿಟ್ಟಿದ್ದಾರೆ. ಅಡಕೆ, ಕಾಫಿ ತೋಟಗಳಿಗೆ ಮಳೆಯಿಂದಾಗಿ ಅನುಕೂಲವಾಗಿದೆ. ತಂಪಾದ ವಾತಾವರಣ ಸೃಷ್ಟಿಯಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement