ಯುವಶಕ್ತಿ ಜವಾಬ್ದಾರಿ ಮೆರೆಯಲಿ
ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಏ.9
ಇಂದಿನ ಯುವ ಶಕ್ತಿಗೆ ಹೆಚ್ಚಿನ ಜವಾಬ್ದಾರಿ ಬರಬೇಕಿದ್ದು, ಈ ಲೋಕಸಭಾ ಚುನಾವಣೆಯಲ್ಲಿ ಯುವ ಜನರ ಪಾತ್ರ ಮಹತ್ವದ್ದಾಗಿದೆ ಎಂದು ಚಲನಚಿತ್ರ ನಟಿ ಭಾವನಾ ಹೇಳಿದ್ದಾರೆ.
ತಾಲೂಕಿನ ಆಲದಗುಡ್ಡೆಯಲ್ಲಿ ವಸ್ತಾರೆ ಹೋಬಳಿ ಯುವ ಕಾಂಗ್ರೆಸ್ ಘಟಕ ಬುಧವಾರ ಆಯೋಜಿಸಿದ್ದ ಬೈಕ್ ಜಾಥಾದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಹಿಂದೂ ಧರ್ಮಕ್ಕೆ ಒಳ್ಳೆಯ ಸಂಸ್ಕಾರವಿದೆ, ನನಗೂ ಈ ದೇಶದಲ್ಲಿ ಹುಟ್ಟಿರುವ ಹೆಮ್ಮೆ ಇದೆ. ವೇದ ಪುರಾಣಗಳಲ್ಲಿ ಸತ್ಯ, ಶಾಂತಿ, ಒಳ್ಳೆಯ ದಾರಿಯಲ್ಲಿ ಸಾಗುವ ಸಂದೇಶವಿದೆ. ಇವೆಲ್ಲದರ ಬಗ್ಗೆ ಜನರಿಗೆ ಅರಿವಿದೆ ಎಂದರು.
ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಸಂಸದ ಜಯಪ್ರಕಾಶ್ ಹೆಗ್ಡೆ ಅವರು ಪ್ರಾಮಾಣಿಕರು ಮತ್ತು ಸೌಮ್ಯ ಸ್ವಭಾವದಿಂದ ಕ್ಷೇತ್ರದ ಜನರ ಪ್ರೀತಿ ವಿಶ್ವಾಸ ಗಳಿಸಿದವರು ಇದನ್ನರಿತು ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸುವಂತೆ ಕರೆ ನೀಡಿದರು.
ವಿಧಾನಪರಿಷತ್ ಸದಸ್ಯೆ ಮೋಟಮ್ಮ ಮಾತನಾಡಿ, ನೆಮ್ಮದಿ, ಅಭಿವೃದ್ಧಿ, ಶಾಂತಿ, ಸಮಗ್ರತೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಹೆಗ್ಡೆಯವರಿಗೆ ಜನ ಮತ ನೀಡಿ ಎಂದರು.
ಹಾಂದಿ, ಕೆಳಗೂರು, ಗುಲ್ಲನ್ ಪೇಟೆ, ಕಬ್ಬಿಣ ಸೇತುವೆ, ವಸ್ತಾರೆ ಸೇರಿದಂತೆ ವಿವಿಧ ಭಾಗಗಳಲ್ಲಿ ಪ್ರಚಾರ ಸಭೆ ನಡೆಯಿತು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಡಿ.ಎಲ್. ವಿಜಯಕುಮಾರ್, ಮುಖಂಡರಾದ ಎ.ಎನ್. ಮಹೇಶ್, ಬಿ.ಎಂ. ಸಂದೀಪ್, ಹೆಚ್.ಎಸ್. ಕೃಷ್ಣೇಗೌಡ, ಎರೇನಹಳ್ಳಿ ಪ್ರಕಾಶ್, ಎಸ್.ಟಿ. ಚಂದ್ರೇಗೌಡ, ವನಮಾಲ ಮೃತ್ಯುಂಜಯ್ಯ, ಜಿಪಂ ಸದಸ್ಯರಾದ ಸವಿತಾ ರಮೇಶ್, ಹೇಮಾವತಿ ದೇವೇಗೌಡ, ಈರೇಗೌಡ, ಇಮ್ತಿಯಾಜ್, ಗಂಗಯ್ಯ, ವಸಂತ್, ಗೀತಾ ಮಂಜುನಾಥ್, ದಿನೇಶ್, ಬಲರಾಮ್, ನಾಗೇಶ್, ಈರಯ್ಯ ಹಾಜರಿದ್ದರು.