ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

'ಸೇವೆ ಬದುಕಿಗೆ ನೆಮ್ಮದಿ ನೀಡಲಿ'

Mainashree
Updated On : 10 Apr 2014, 11:09 am

ತರೀಕೆರೆ: ಬದುಕಿನಲ್ಲಿ ಸಮಾಧಾನ ಕೊಡುವಂತಹ ಕೆಲಸ ಮಾಡಬೇಕೆಂದು ರೋಟರಿ ಸಂಸ್ಥೆ ಜಿಲ್ಲಾ ಗವರ್ನರ್ ಎಸ್.ಗುರುರಾಜ್ ತಿಳಿಸಿದ್ದಾರೆ.
ಅವರು, ರೋಟರಿ ಸಂಸ್ಥೆ ವತಿಯಿಂದ, ಸಂಸ್ಥೆ ಆವರಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ರೋಟರಿ ಸಂಸ್ಥೆ ಜಿಲ್ಲಾ ಸಹಾಯಕ ರಾಜ್ಯಾಪಾಲ ಡಾ. ಜಿ.ಸಿ. ಶರತ್ ಮಾತನಾಡಿ, ಜಿಲ್ಲಾ ವ್ಯಾಪ್ತಿಯಲ್ಲಿ 12 ರೋಟರಿ ಸಂಸ್ಥಗಳಲ್ಲಿ ಸೇವೆ ಸಲ್ಲಿಸುವ ಅವಕಾಶ ದೊರಕಿತು. ಅವಕಾಶದಿಂದ ಅನುಭವವೂ ದೊರಕಿತು. ರೋಟರಿ ಸಂಸ್ಥೆ ಹೆಚ್ಚು ವಿಚಾರ ಒಳಗೊಂಡಿದೆ, ತರೀಕೆರೆ ರೋಟರಿ ಸಂಸ್ಥೆ ಸಮಾಜ ಮುಖಿಯಾಗಿ ಕೆಲಸ ನಿರ್ವಹಿಸಿದೆ ಎಂದು ತಿಳಿಸಿದರು.
ರೋಟರಿ ಸಂಸ್ಥೆ ಅಧ್ಯಕ್ಷ ಕೆ.ಜಿ. ತಿಪ್ಪೇಶ್ ಮಾತನಾಡಿ ಹೆಚ್ಚು ಸಾಮಾಜಿಕ ಸೇವೆ ಸಲ್ಲಿಸಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಕಾರ್ಯದರ್ಶಿ ಪ್ರೊ. ಬಿ.ಇ. ಕುಮಾರಪ್ಪ ವಾರ್ಷಿಕ ವರದಿ ನೀಡಿದರು.
ಗಂಗಾಧರಪ್ಪ, ದಿನೇಶ್, ಬಿ.ರಾಜಪ್ಪ, ಡಾ. ಆಚಾರ್ಯ, ಪ್ರವೀಣ್ ನಾಹರ್, ರವಿಶಾನುಭೋಗ್,  ಟಿ.ಆರ್.ಶ್ರೀಧರ್, ಮಂಜುನಾಥ್, ಪಿ.ನಾಗರಾಜ್,  ರೋಟರಿ ಸಂಸ್ಥೆ ಮತ್ತು  ಇನ್ನರ್ ವೀಲ್ ಕ್ಲಬ್ ಸದಸ್ಯರು, ಲಕ್ಷ್ಮಿ ವಿಶ್ವನಾಥ್ ಮೊದಲಾದವರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement