ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಮತದಾನದ ವೇಳೆ ನಿಷ್ಪಕ್ಷ ಕಾರ್ಯ ನಿರ್ವಹಿಸಿ

Mainashree
Updated On : 11 Apr 2014, 11:37 am

ಮತಗಟ್ಟೆ ಅಧಿಕಾರಿಗಳ ತರಬೇತಿ ಕಾರ್ಯಾಗಾರದಲ್ಲಿ ಜಿಲ್ಲಾಧಿಕಾರಿ ವಿ.ಪಿ. ಇಕ್ಕೇರಿ
ಮೊಳಕಾಲ್ಮುರು: ಮತದಾನದ ಹೊಣೆ ಹೊತ್ತಿರುವ ಅಧಿಕಾರಿಗಳು ಮತದಾನ ಸಮಯದಲ್ಲಿ ಸಮರ್ಪಕವಾಗಿ ಕಾರ್ಯನಿರ್ವಹಿಸಿ ಚುನಾವಣೆಯನ್ನು ಯಶಸ್ವಿಗೊಳಿಸಬೇಕೆಂದು ಜಿಲ್ಲಾಧಿಕಾರಿ ವಿ.ಪಿ. ಇಕ್ಕೇರಿ ಸೂಚಿಸಿದ್ದಾರೆ.
ಪಟ್ಟಣದ ಗುರುಭವನದಲ್ಲಿ ಕ್ಷೇತ್ರವ್ಯಾಪ್ತಿಯ ಚುನಾವಣೆಗೆ ನೇಮಕಗೊಂಡಿರುವ ಅಧ್ಯಕ್ಷಾಧಿಕಾರಿ, ಮತಗಟ್ಟೆ ಅಧಿಕಾರಿಗಳಿಗೆ ಆಯೋಜಿಸಲಾಗಿದ್ದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಈ ಬಾರಿ ವಿಶೇಷವಾದ ಮತಯಂತ್ರಗಳು ಮತದಾನಕ್ಕೆ ಬಳಸಲಾಗಿದೆ. ಚುನಾವಣಾ ಕಾರ್ಯಕ್ಕೆ ನೇಮಕಗೊಂಡ  ಅಧಿಕಾರಿಗಳು ಮತದಾನಕ್ಕೆ ಬಳಸಲಾಗುವ ಯಂತ್ರಗಳ ಬಳಕೆ ಹಾಗೂ ಅದರ ಲೋಪದೋಷಗಳ ಸರಿಪಡಿಸುವಿಕೆ, ಯಂತ್ರ ಬಿಚ್ಚುವುದು, ಸೀಲ್ ಮಾಡುವ ಕುರಿತು ನೀಡುವ ವಿಶೇಷ ತರಬೇತಿಯನ್ನು ಪಡೆದು ಮತಗಟ್ಟೆಗಳಲ್ಲಿ ಮತದಾರರಿಗೆ ವಿನಯತೆಯಿಂದ ಮತದಾನ ಕಾರ್ಯವನ್ನು ಮಾಡಬೇಕು ಎಂದರು.
ನಿಮ್ಮ ನಿಮ್ಮ ಮತಗಟ್ಟೆಗಳಲ್ಲಿ ನೀತಿ ಸಂಹಿತೆ ಉಲ್ಲಂಘನೆ ಆಗದಂತೆ ಕ್ರಮಬದ್ಧವಾಗಿ ಮತದಾನ ನಡೆಸಬೇಕು. ಯಾವುದೇ ಲೋಪಗಳು ನಡೆಯದಂತೆ ಮತಯಂತ್ರಗಳನ್ನು ಮೊದಲೇ ಪರೀಕ್ಷಿಸಿ ಕಟ್ಟುನಿಟ್ಟಾಗಿ ಕಾರ್ಯನಿರ್ವಹಿಸಿ  ಶಾಂತಿಯುತ ಮತದಾನ ನಡೆಸಬೇಕೆಂದರು.
ಪ್ರಸ್ತುತ ಚುನಾವಣೆಯಲ್ಲಿ ಯಶಸ್ಸು ಗಳಿಸಲು ನಿಮ್ಮ ಕಾರ್ಯಕ್ಷಮತೆ ಹಾಗೂ ನಿಮ್ಮ ಸೇವೆ ಅತಿಮುಖ್ಯ. ಹಾಗಾಗಿ, ಪ್ರತಿಯೊಬ್ಬರು ಮತಗಟ್ಟೆಯಲ್ಲಿ ನಿಗದಿತ ಸಮಯದಲ್ಲಿ ಮತದಾನದ ಸಿದ್ಧತೆ ನಡೆಸಿ ನಿಯಮ ಉಲ್ಲಂಘನೆ ಯಾಗದಂತೆ ಮತದಾನಕ್ಕೆ ಶ್ರಮಿಸಬೇಕು. ಚುನಾವಣಾ ಆಯೋಗವು ಬಿಗಿನಿಲುವು ತಾಳಿದೆ. ನೇಮಕಗೊಂಡ ಅಧಿಕಾರಿಗಳು ಕಟ್ಟುನಿಟ್ಟಾಗಿ ಕಾರ್ಯನಿರ್ವಹಿಸಬೇಕು. ಈ ಬಾರಿ ಮತದಾನಕ್ಕೆ ನೂತನ ತಂತ್ರಜ್ಞಾನದ ಮತಯಂತ್ರಗಳು ಬಳಕೆಯಾಗಲಿವೆ. ತರಬೇತುದಾರರು ನೀಡುವ ಸಂಪೂರ್ಣ ಮಾಹಿತಿ ಪಡೆದುಕೊಳ್ಳಬೇಕು ಎಂದರು.
ತರಬೇತಿ ಕಾರ್ಯಾಗಾರದಲ್ಲಿ ಬ್ಯಾಲೆಟ್ ನಮೂನೆ ಸೇರಿದಂತೆ ಹಲವು ರೀತಿಯಲ್ಲಿ ಮತಯಂತ್ರಗಳ ಬಳಕೆಯ ಕುರಿತು ವೀಡೀಯೋ ಚಿತ್ರದ ಮೂಲಕ ಮಾಹಿತಿ ನೀಡಿದರು. ತಹಸೀಲ್ದಾರ್ ಪ್ರಮೋದ್, ಸಹಾಯಕ ಚುನಾವಣಾಧಿಕಾರಿ ಎ.ಬಿ. ಪರೆಡ್ಡಿ ಮೊದಲಾದ ಅಧಿಕಾರಿಗಳು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement