ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಆಯೋಗದ ನಿರ್ದೇಶನ ತಪ್ಪದೇ ಪಾಲಿಸಿ: ಡಿಸಿ

Mainashree
Updated On : 12 Apr 2014, 10:52 am

ಚಿಕ್ಕಮಗಳೂರು: ಲೋಕಸಭಾ ಚುನಾವಣಾ ಕರ್ತವ್ಯಕ್ಕೆ ನೇಮಕಗೊಂಡಿರುವ ಮತಗಟ್ಟೆ ಅಧಿಕಾರಿ, ಸಿಬ್ಬಂದಿಗಳಿಗೆ ನಗರದ ಎಐಟಿ ಕಾಲೇಜು ಸಭಾಂಗಣದಲ್ಲಿ ಎರಡನೇ ಸುತ್ತಿನ ತರಬೇತಿಯನ್ನು ಗುರುವಾರ ನೀಡಲಾಯಿತು.
ಜಿಲ್ಲಾಧಿಕಾರಿ ಬಿ.ಎಸ್. ಶೇಖರಪ್ಪ ಅವರು ಮಾತನಾಡಿ, ಮತಗಟ್ಟೆ ಅಧಿಕಾರಿಗಳು ಚುನಾವಣಾ ಆಯೋಗ ನೀಡಿರುವ ಕೈಪಿಡಿಯಲ್ಲಿರುವ ನಿರ್ದೇಶನಗಳನ್ನು ತಪ್ಪದೇ ಅನುಸರಿಸಬೇಕು. ಮತದಾನದ ಪ್ರಾರಂಭಕ್ಕೂ ಮುಂಚೆ ಅಣುಕು ಮತದಾನವನ್ನು ನಡೆಸಬೇಕು ಎಂದರು.
ಮೆಸ್ಕಾಂಗೆ ಸೂಚನೆ: ಈ ಭಾರಿ ಮತದಾನ ಸಮಯವು ಬೆಳಿಗ್ಗೆ 7 ರಿಂದ ಸಂಜೆ 6 ರವರೆಗೆ ನಡೆಯಲಿದ್ದು, ಮತದಾನ ಕೇಂದ್ರದಲ್ಲಿ ಬೆಳಕಿನ ಅಭಾವವಾಗದಂತೆ ಸರಾಗವಾಗಿ ವಿದ್ಯುತ್ ಸರಬರಾಜು ಮಾಡಲು ಮೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ತಿಳಿಸಿದರು.
ಮತಗಟ್ಟೆ ಸಿಬ್ಬಂದಿಗಳು ಸಮನ್ವಯದೊಂದಿಗೆ ಚುನಾವಣೆ ಕರ್ತವ್ಯ ನಿರ್ವಹಿಸಿದಾಗ ಚುನಾವಣೆ ಕಾರ್ಯವು ಸರಾಗವಾಗಿ ನಡೆಯುವುದರೊಂದಿಗೆ ಯಾವುದೇ ಗೊಂದಲಕ್ಕೆ ಅವಕಾಶ ಇರುವುದಿಲ್ಲ ಎಂದರು.
ತರಬೇತಿ: ಸಲೀಂ ಪಾಷಾ ಅವರು ತರಬೇತಿ ನೀಡುತ್ತಾ ಎಲೆಕ್ಟ್ರಾನಿಕ್ ಮತಯಂತ್ರದ ಸಮರ್ಪಕ ಬಳಕೆ ಸೇರಿದಂತೆ ಮತದಾನ ಕೇಂದ್ರದಲ್ಲಿ ಮತಗಟ್ಟೆ ಅಧಿಕಾರಿ ಹಾಗೂ ಇತರೆ ಸಿಬ್ಬಂದಿಗಳು ವಹಿಸಬೇಕಾದ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಸ್ವವಿರವಾಗಿ ಗಣಕಯಂತ್ರದ ಸಹಾಯದಿಂದ ಸ್ಲೈಡ್ ಷೋಗಳ ಮುಖಾಂತರ ವಿವರಿಸಿದರು.
ತರಬೇತಿ ಕಾರ್ಯದಲ್ಲಿ ಸಹಾಯಕ ಚುನಾವಣಾಧಿಕಾರಿ ರಾಜಗೋಪಾಲ್, ತಹಶೀಲ್ದಾರ್ ಶಿವಣ್ಣ, ರವಿ ಪ್ರಸಾದ್ ಹಾಗೂ ಮತಗಟ್ಟೆ ಅಧಿಕಾರಿಗಳು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement