ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ತರೀಕೆರೆ ಬಳಿ ಸರಣಿ ಅಪಘಾತ: ಇಬ್ಬರ ಸಾವು

Mainashree
Updated On : 12 Apr 2014, 10:53 am

ಕನ್ನಡಪ್ರಭ ವಾರ್ತೆ ಟಿ ತರೀಕೆರೆ ಟಿ ಏ.11
ಪಟ್ಟಣದ ಸಮೀಪ ಬೇಲೇನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಣಿ ಅಪಘಾತ ನಡೆದು ಬೈಕ್‌ನಲ್ಲಿ ಹೋಗುತ್ತಿದ್ದ ಇಬ್ಬರು ಮೃತಪಟ್ಟಿದ್ದು, ಎರಡು ಹಸುಗಳು ಸೇರಿ ನಾಲ್ಕು ಜನರಿಗೆ ಗಾಯಗಳಾದ ಘಟನೆ ಶುಕ್ರವಾರ ಮಧ್ಯಾಹ್ನ ಸಂಭವಿಸಿದೆ.
ಮೃತಪಟ್ಟವರನ್ನು ಎಂ.ಸಿ.ಹಳ್ಳಿಯ ಸುರೇಶ್(38), ಮಹೇಶ್ (34) ಎಂದು ಗುರುತಿಸಿದ್ದು, ಮಹೇಶ್ ಸ್ಥಳದಲ್ಲೇ ಮತ್ತು ಸುರೇಶ್ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಮೃತಪಟ್ಟಿದ್ದಾರೆ. ಇಬ್ಬರೂ ತರೀಕೆರೆಯಿಂದ ಬೈಕ್‌ನಲ್ಲಿ ಎಂ.ಸಿ. ಹಳ್ಳಿಗೆ ಹೋಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ವಿವರ: ತರೀಕೆರೆಯಿಂದ ಭದ್ರಾವತಿ ಕಡೆಗೆ ಹೋಗುತ್ತಿದ್ದ ಕ್ಯಾಂಟರ್ ಲಾರಿಯು, ಬೇಲೇನಹಳ್ಳಿ ಬಳಿ ಅದೇ ಮುಖವಾಗಿ ಹೋಗುತ್ತಿದ್ದ ಟ್ರ್ಯಾಕ್ಟರ್‌ಗೆ ಹಿಂಬದಿಯಿಂದ ಬಂದು ಅಪ್ಪಳಿಸಿದೆ. ಲಾರಿ ಗುದ್ದಿದ ರಭಸಕ್ಕೆ ಟ್ರ್ಯಾಕ್ಟರ್ ದೂರಕ್ಕೆ ಬಿದ್ದಿದೆ. ಅದರ ಮುಂದೆ ಹೋಗುತ್ತಿದ್ದ ಬೈಕ್‌ಗೂ ಲಾರಿ ಡಿಕ್ಕಿ ಹೊಡೆದು ನಂತರ ಟಾಟಾ ಎಸಿ ವಾಹನಕ್ಕೂ ತಾಗಿ ಅದರೊಳಗಿದ್ದ ಎರಡು ಹಸು ಸೇರಿಕೊಂಡು ನಾಗರಾಜ್, ಸುರೇಶ್, ಶೇಖರಪ್ಪ ಮತ್ತು ಹನುಮಂತಪ್ಪ ಎಂಬವರಿಗೆ ಗಾಯಗಳಾಗಿದೆ.
ಕ್ಯಾಂಟರ್ ಲಾರಿ ಚಾಲಕ ನಾಪತ್ತೆಯಾಗಿದ್ದಾನೆ. ಸ್ಥಳಕ್ಕೆ ಶಾಸಕ ಜಿ.ಎಚ್. ಶ್ರೀನಿವಾಸ್, ಮಾಜಿ ಶಾಸಕ ಡಿ.ಎಸ್. ಸುರೇಶ್ ಡಿವೈಎಸ್‌ಪಿ ಸದಾನಂದ ನಾಯಕ್, ಪೊಲೀಸ್ ಇನ್ಸ್‌ಪೆಕ್ಟರ್ ಸುರೇಶ್ ಭೇಟಿ ನೀಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement