ಶಿಕ್ಷಕಿ ಬಟ್ಟೆ ಎಳೆದ ಬಸ್ ಏಜೆಂಟ್ ಮಾವನ ಮನೆಗೆ
ಸಾಗರ: ಇಲ್ಲಿನ ಮುಖ್ಯ ಬಸ್ ನಿಲ್ದಾಣದಲ್ಲಿ ಶಿಕ್ಷಕಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಬಸ್ ಏಜೆಂಟ್ನನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ. ಯುವಕ ಈಗ ಮಾವನ ಮನೆ ಕಂಬಿ ಎಣಿಸುತ್ತಿದ್ದಾರೆ.
ಏನಾಯ್ತು?: ತೀರ್ಥಹಳ್ಳಿ ತಾಲೂಕಿನ ಗುಡ್ಡೆಕೇರಿ ಗ್ರಾಮದ ಆಸಿಫ್ ಎಂಬಾತ ದುರ್ಗಾಶಕ್ತಿ ಬಸ್ ಏಜೆಂಟ್ ಆಗಿದ್ದ. 1 ವಾರದಿಂದ ದುರ್ಗಾಶಕ್ತಿ ಬಸ್ ಏಜೆಂಟ್ ಆಗಿದ್ದ. ಸಾಗರದ ಟೈಪಿಂಗ್ ಇನ್ಸ್ಟಿಟ್ಯೂಟ್ನಲ್ಲಿ ಶಿಕ್ಷಕಿಯಾಗಿದ್ದ ಬಳಸಗೋಡು ಯುವತಿಯೊಬ್ಬಳು ಸಂಜೆ ಇದೇ ಬಸ್ಸಿನಲ್ಲಿ ಗ್ರಾಮಕ್ಕೆ ಹೋಗುತ್ತಿದ್ದಳು.
ಏ.8 ರಂದು ಸಂಜೆ 5.30 ಗಂಟೆ ಸುಮಾರಿಗೆ ಶಿಕ್ಷಕಿ ಗ್ರಾಮಕ್ಕೆ ಹೋಗಲು ಬಸ್ ಹತ್ತಿದ್ದಳು. ಆಗ ಸಲುಗೆ ಬೆಳೆಸಿಕೊಂಡ ಆಸಿಫ್ ಶಿಕ್ಷಕಿಯ ಮೊಬೈಲ್ ಕಸಿದುಕೊಂಡು ತನ್ನ ಮೊಬೈಲ್ಗೆ ಕರೆ ಮಾಡಿ ಆಕೆಯ ಅನುಮತಿಯಿಲ್ಲದೇ ನಂಬರ್ ಸೇವ್ ಮಾಡಿಕೊಂಡಿದ್ದ. ತನ್ನ ಮೊಬೈಲ್ನಿಂದ ನಿತ್ಯ ಶಿಕ್ಷಕಿಗೆ ಫೋನ್ ಮಾಡುತ್ತಿದ್ದ. ಇದರಿಂದ ಯುವತಿ ಕಿರಿಕಿರಿ ಅನುಭವಿದ್ದಳು.
ಏ.10 ರಂದು ಶಿಕ್ಷಕಿ ಮತ್ತೆ ಅದೇ ಬಸ್ನಲ್ಲಿ ಗ್ರಾಮಕ್ಕೆ ಹೋಗಲು ಬಂದಿದ್ದಳು. ಆಗಲೂ ಆಸಿಫ್ ತನ್ನ ಚೇಷ್ಟೆ ಮುಂದುವರಿಸಿ ಮೊಬೈಲ್ ಕಸಿದುಕೊಂಡಿದ್ದಲ್ಲದೆ ಕರೆ ಮಾಡಿದರೂ ಏಕೆ ಸ್ವೀಕರಿಸಲಿಲ್ಲ ಎಂದು ಜಗಳ ತೆಗೆದಿದ್ದ.
ಇದರಿಂದ ನೊಂದ ಶಿಕ್ಷಕಿ ತಕ್ಷಣ ಬಸ್ ಇಳಿದು ಬಸ್ ನಿಲ್ದಾಣದಲ್ಲಿದ್ದ ಕಾಯಿನ್ ಬೂತ್ ಮೂಲಕ ತನ್ನ ಪೋಷಕರಿಗೆ ಕರೆ ಮಾಡಲು ಪ್ರಯತ್ನಿಸಿದಳು. ಆಗಲೂ ಶಿಕ್ಷಕಿಯನ್ನು ಹಿಂಬಾಲಿಸಿದ ಬಸ್ ಏಜೆಂಟ್ ಆಸಿಫ್ ಶಿಕ್ಷಕಿಯ ಬಟ್ಟೆ ಎಳೆದು ಮತ್ತೆ ಹಲ್ಲೆಗೆ ಮುಂದಾದ.
ಇದನ್ನೆಲ್ಲ ಗಮನಿಸುತ್ತಿದ್ದ ಸಾರ್ವಜನಿಕರು ಆಸಿಫ್ನನ್ನು ಥಿಲಿಸಿ ಪೇಟೆ ಠಾಣೆ ಪೊಲೀಸರಿಗೆ ಒಪ್ಪಿಸಿದರು. ಶಿಕ್ಷಕಿ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿ ಕ್ರಮ ಜರುಗಿಸಿದರು. ಬಸ್ ಏಜೆಂಟ್ ಆಸಿಫ್ ಈಗ ಪೊಲೀಸ್ ಮಾವನ ಮನೆಯ ಕಂಬಿ ಎಣಿಸುತ್ತಿದ್ದಾನೆ.